ಜಿಲ್ಲೆ

ನಿಟ್ಟೆ ಉಷಾ ನರ್ಸಿಂಗ್ ಸೈನ್ಸ್‌ಸ್ ವಾರ್ಷಿಕ ದಿನ ‘ಉಡಾನ್’

ಉಳ್ಳಾಲ: ನಿಟ್ಟೆ ಉಷಾ ನರ್ಸಿಂಗ್ ಸೈನ್ಸಸ್‌ನಿಂದ ವಾರ್ಷಿಕ ದಿನಾಚರಣೆ ‘ಉಡಾನ್’ ಕಾರ್ಯಕ್ರಮ ಶುಕ್ರವಾರ ಪನೀರ್ ಕ್ಯಾಂಪಸ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿಯತಕಾಲಿಕೆ ‘ದರ್ಪಣ’ ಬಿಡುಗಡೆ ಮಾಡಲಾಯಿತು. ವೀರೇಶ್ ಕಡೇಮನಿ ಮತ್ತು ತೇಜ ಬಿ.ಸಿ. ಅವರು ಬರೆದ ‘ಪ್ರೊಫೆಶನಲಿಸಮ್, ಪ್ರೊಫೆಶನಲ್ ವ್ಯಾಲ್ಯೂಸ್, ಎಥಿಕ್ಸ್, ಇನ್‌ಕ್ಲೂಡಿಂಗ್ ಬಯೋಎಥಿಕ್ಸ್ ಫಾರ್ ಬಿಎಸ್ಸಿ ನರ್ಸಿಂಗ್' ಪುಸ್ತಕ ಬಿಡುಗಡೆಗೊಳಿಸಲಾಯಿತು.

 ನರ್ಸಿಂಗ್ ವೃತ್ತಿಗೆ ನೀಡಿದ ಗಮನಾರ್ಹ ಕೊಡುಗೆ ಪರಿಗಣಿಸಿ ನವದೆಹಲಿಯ ಭಾರತೀಯ ನರ್ಸಿಂಗ್ ಕೌನ್ಸಿಲ್‌ನ ಹಿರಿಯ ಸಲಹೆಗಾರ್ತಿ ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್.ಭಾರತಿ ಅವರನ್ನು ಗೌರವಿಸಲಾಯಿತು. ಅಸಾಧಾರಣ ನಾಯಕತ್ವ ಕೌಶಲ್ಯ ಮತ್ತು ಕಾರ್ಯಕ್ಷಮತೆಗಾಗಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸಿಸ್ಟರ್ ಜೀವಿತಾ ಲೋಬೊ ಮತ್ತು ಜಿಎನ್‌ಎಂ ವಿದ್ಯಾರ್ಥಿ ರೋಲ್ವಿನ್ ರೋಹನ್ ಡಿಸಿಲ್ವಾ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತಿಥಿಗಳು ಎಂಸಿಎಚ್ ಪ್ರಯೋಗಾಲಯ ಉದ್ಘಾಟಿಸಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿ ಭಾರತೀಯ ನರ್ಸಿಂಗ್ ಕೌನ್ಸಿಲ್‌ನ ಹಿರಿಯ ಸಲಹೆಗಾರ್ತಿ ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್.ಭಾರತಿ ಮುಖ್ಯ ಅತಿಥಿಯಾಗಿದ್ದರು. ಪ್ರೊ.ಸಬಿತಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಫಾತಿವಾ ಡಿಸಿಲ್ವಾ ವಾರ್ಷಿಕ ವರದಿ ಮಂಡಿಸಿದರು. ಕ್ಲೀಟಾ ಅನ್ಲೈನ್ ಪಿಂಟೊ ವಂದಿಸಿದರು.