ಎನ್‌ಐಟಿಕೆ ಸುರತ್ಕಲ್‌ನ 65ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗೈದ ಎನ್‌ಐಟಿಕೆ ಸಿಬ್ಬಂದಿಯ ಸುಮಾರು 20 ಮಕ್ಕಳಿಗೆ ಮೆರಿಟ್ ವಿದ್ಯಾರ್ಥಿವೇತನ ಸಹಿತ ಪ್ರಮಾಣಪತ್ರ ನೀಡಲಾಯಿತು. ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ, ಎನ್‌ಐಟಿಕೆ ಮಾಜಿ ನಿರ್ದೇಶಕ ಪ್ರೊ.ಎಸ್.ಎಸ್.ಮೂರ್ತಿ ಇದ್ದರು. 
ಜಿಲ್ಲೆ

ಎನ್‌ಐಟಿಕೆ ಸುರತ್ಕಲ್ 65ನೇ ಸಂಸ್ಥಾಪನಾ ದಿನಾಚರಣೆ

Mangaluru - Shravan Kumar Nala

ಮಂಗಳೂರು: ದೇಶದ ಪ್ರತಿಷ್ಠಿತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಸುರತ್ಕಲ್‌ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ ಐಟಿಕೆ) 65ನೇ ಸಂಸ್ಥಾಪನಾ ದಿನಾಚರಣೆಯನ್ನು ಆಗಸ್ಟ್ 6 ರಂದು ಸಂಭ್ರಮದಿಂದ ಆಚರಿಸಲಾಯಿತು.

ಸುರತ್ಕಲ್ ಆವರಣದ ಪ್ರವೇಶ ದ್ವಾರದಲ್ಲಿರುವ ಎನ್‌ಐಟಿಕೆ ಸಂಸ್ಥೆಯ ಸಂಸ್ಥಾಪಕ ಪಿತಾಮಹ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಪ್ರತಿಮೆಗೆ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಎನ್‌ಐಟಿಕೆ ಮಾಜಿ ನಿರ್ದೇಶಕ ಪ್ರೊ.ಎಸ್.ಎಸ್.ಮೂರ್ತಿ ಮಾತನಾಡಿ, ಕರಾವಳಿಯಲ್ಲಿ ಎನ್‌ಐಟಿಕೆ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಶ್ರಮ ಅನನ್ಯವಾಗಿದೆ. ಇವರ ಶ್ರಮದ ಫಲವಾಗಿ ಇಂದು ಎನ್‌ಐಟಿಕೆ ದೇಶದಲ್ಲೇ ಪ್ರಮುಖ ಪ್ರತಿಷ್ಠಿತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಾಗಿ ಎದ್ದುನಿಂತಿದೆ ಎಂದರು.

ಪ್ಲಾನ್ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ರಾಜ್ ನೂಯಿ, ಎನ್‌ಐಟಿಕೆ ಹಳೆಯ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎಂ.ನಿರಂಜನ್ ಸಹಿತ ಹಲವರು ಉಪಸ್ಥಿತರಿದ್ದರು.

ಶೈಕ್ಷಣಿಕ ಸಾಧನೆಗೈದ ಎನ್‌ಐಟಿಕೆ ಸಿಬ್ಬಂದಿಯ ಸುಮಾರು 20 ಮಕ್ಕಳಿಗೆ 1981 ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ಮೆರಿಟ್ ವಿದ್ಯಾರ್ಥಿವೇತನ ಸಹಿತ ಪ್ರಮಾಣಪತ್ರ ನೀಡಲಾಯಿತು. ಎನ್ ಐಟಿಕೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಏಳು ಬೋಧಕ ಸಿಬ್ಬಂದಿ ಮತ್ತು ಹತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.