ಜಿಲ್ಲೆ

ನಿತೇಶ್ ಶೆಟ್ಟಿ ತೀವ್ರ ವಿಚಾರಣೆ

ರೇಷ್ಮೆ ನಗರ ಡೆಸ್ಕ್

ರಿಕ್ಕಿ ರೈ ಗುಂಡಿನ ದಾಳಿ ಪ್ರಕರಣ |

ಬಿಡದಿ: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ವಿಚಾರಣೆಗೆ ಬಿಡದಿ ಠಾಣೆಗೆ ಬುಧವಾರ ನಿತೇಶ್ ಶೆಟ್ಟಿ ಹಾಜರಾಗಿದ್ದರು.

ನಿತೇಶ್ ಶೆಟ್ಟಿ ವಕೀಲರ ಜತೆಗೆ ಠಾಣೆಗೆ ಆಗಮಿಸಿದ್ದರು. ಎ.ಎಸ್ಪಿ ಸುರೇಶ್ ಅವರು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ. ಸತತ 3 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ.

ಪ್ರಕರಣ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಪಿ ಶ್ರೀನಿವಾಸ್ ಗೌಡ, ಶೂಟೌಟ್

ಪ್ರಕರಣ ಸಂಬಂಧ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಂದುವರಿದೆ. ಕೆಲವು ವರದಿಗಾಗಿ ಕಾಯುತ್ತಿದ್ದೇವೆ. ದೂರುದಾರರು ಹಲವರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.ಹೀಗಾಗಿ ಪ್ರಕರಣ ಸಂಬಂಧ ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗುತ್ತಿದೆ. ಎ್ಐಆರ್‌ನಲ್ಲಿ ಇಲ್ಲದವರ ಹೇಳಿಕೆ ಪಡೆಯಲಾಗುತ್ತಿದೆ. ಕೆಲವು ವರದಿ ಬಂದ ನಂತರ ಪ್ರಕರಣದ ಅಂತಿಮ ಹಂತಕ್ಕೆ ಬರುತ್ತೇವೆ. ಸಂಶಯಾಸ್ಪದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ ಎಂದರು.

ಫೈರಿಂಗ್ ಪ್ರಕರಣ ಆಗಿರುವ ಕಾರಣದಿಂದಾಗಿ ಹಲವು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಎಲ್ಲರ ವಿಚಾರಣೆ ಮುಗಿದ ನಂತರ ಅಂತಿಮ ನಿರ್ಧಾರ ಮಾಡುತ್ತೇವೆ. ಪ್ರಕರಣದ ಸಂಶಯಾಸ್ಪದ ವ್ಯಕ್ತಿ ಇಬ್ಬರು ಆಸ್ಪತ್ರೆಯಲ್ಲಿದ್ದಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ತೀವ್ರ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.