ಜಿಲ್ಲೆ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ಪ್ರಕ್ರಿಯೆ ಜರುಗಿಸಲು ದಿನಾಂಕ ನಿಗದಿ ಪಡಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
 ಜೂ.12 ರಂದು ಚಿಕ್ಕೋಡಿ ತಾಲೂಕಿನ ಸಿಟಿ ಕಮಿಷನರ್ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಗ್ರಾಪಂಗಳು, ರಾಯಬಾಗ ಪಟ್ಟಣದ ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ  3 ಗಂಟೆಯಿಂದ 5 ಗಂಟೆಯವರೆಗೆ ಮೀಸಲಾತಿ ಪ್ರಕ್ರಿಯೆ ನಡೆಯಲಿದೆ.
 ಗೋಕಾಕ ತಾಲೂಕಿನ ಘಟಪ್ರಭಾ ರಸ್ತೆಯಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜೂ.15 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಹಾಗೂ ಮೂಡಲಗಿ ತಾಲೂಕಿನ ಘಟಪ್ರಭಾ ರಸ್ತೆಯಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ  ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ಯವರೆಗೆ ನಡೆಯಲಿದೆ.
 ಬೈಲಹೊಂಗಲ ತಾಲೂಕಿನ  ನಾಗನೂರ ಶಿವಬಸವ ಸ್ವಾಮೀಜಿ ಕಲ್ಯಾಣ ಮಂಟಪ (ಸಮುದಾಯ ಭವನ) ದಲ್ಲಿ ಜೂ. 16 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ,  ಕಿತ್ತೂರು ತಾಲೂಕಿನ  ನಾಗನೂರ ಶಿವಬಸವ ಸ್ವಾಮೀಜಿ ಕಲ್ಯಾಣ ಮಂಟಪ (ಸಮುದಾಯ ಭವನ) ದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ಯವರಗೆ ನಡೆಯಲಿದೆ.ಸವದತ್ತಿ ತಾಲೂಕಿನ ಯಂಡ್ರಾವಿ ರಸ್ತೆಯ ಉಮಾಚಂದ್ರ ಸುಳ್ಳದ ಕಲ್ಯಾಣ ಮಂಟಪದಲ್ಲಿ ಜೂ. 17 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಹಾಗೂ ಯರಗಟ್ಟಿ ತಾಲೂಕಿನ ಯಂಡ್ರಾವಿ ರಸ್ತೆಯ ಉಮಾಚಂದ್ರ ಸುಳ್ಳದ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ಯವರಗೆ ನಡೆಯಲಿದೆ,
 ಖಾನಾಪುರ ತಾಲೂಕಿನ ಕರಂಬಳ ರಸ್ತೆಯ ಪಾಟೀಲ್ ಗಾರ್ಡನ್ ನಲ್ಲಿ ಜೂ. 19 ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಮೀಸಲಾತಿ ಪ್ರಕ್ರಿಯೆ ಜರುಗಲಿದೆ ಎಂದು ಡಿಸಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--