ಚಿಕ್ಕಮಗಳೂರು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಕೆ.ಸಿ.ನಿಶಾಂತ್, ಎಂ.ಬಿ.ಅಶೋಕ್‌ಕುಮಾರ್, ಡಿ.ಎಂ.ಕುಮಾರ್, ದರ್ಶನ್, ಜೆ.ಸಿ.ಗಿರೀಶ್, ಸಿ.ಎಂ.ಧನAಜಯಗೌಡ, ಸಿ.ಈ.ಚೇತನ್ ಮತ್ತಿತರರಿದ್ದರು. 
ಜಿಲ್ಲೆ

ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ನಿಶಾಂತ್ ಆಯ್ಕೆ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಕೆ.ಸಿ.ನಿಶಾಂತ್ ಆಯ್ಕೆಯಾಗಿದ್ದಾರೆ. ನಗರದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಪಟದಲ್ಲಿ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಕೆ.ಸಿ.ನಿಶಾಂತ್ ಹಾಗೂ ಕಡೂರು ರುದ್ರೇಶ್ ನಡುವೆ ಚುನಾವಣೆ ಏರ್ಪಟ್ಟಿತ್ತು. ೬೪ ಮತಗಳ ಅಂತರದಿAದ ಕೆ.ಸಿ.ನಿಶಾಂತ್ ಗೆಲುವು ಸಾಧಿಸಿದ್ದಾರೆ.

ನಿರ್ದೇಶಕರಾಗಿ ಎಂ.ಬಿ.ಅಶೋಕ್‌ಕುಮಾರ್, ಡಿ.ಎಂ.ಕುಮಾರ್, ದರ್ಶನ್, ಜೆ.ಸಿ.ಗಿರೀಶ್, ಸಿ.ಎಂ.ಧನAಜಯಗೌಡ, ಸಿ.ಈ.ಚೇತನ್, ಎಂ.ಎನ್.ಹರೀಶ್, ಬಿ.ಎಸ್.ಶಿವಕೀರ್ತಿ, ಸಿ.ಎಂ.ಕೀರ್ತನ, ಜಿ.ಸಿ.ಕಿಶನ್, ಸಿ.ಎನ್.ಗಂಗಾಧರ್, ಯು.ಎಂ.ಹೇಮಲತಾ, ಬಿ.ಎಚ್.ಮಂಜುಳಾ, ಬಿ.ಆರ್.ಜಯಪ್ರಕಾಶ್, ಎಂ.ವಿ.ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ಅಧ್ಯಕ್ಷರಾಗಿ ಆಯ್ಕೆಗೊಂಡ ಹಾಗೂ ನೂತನ ಸಮಿತಿ ರಚನೆಗೊಂಡ ಹಿನ್ನೆಲೆ ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಳಿ ತೆರಳಿ ಆಶೀರ್ವಾದ ಪಡೆದರು.