Nirmoha is possible through Satsang 
ಜಿಲ್ಲೆ

ಸತ್ಸಂಗದಿಂದ ನಿರ್ಮೋಹ ಸಾಧ್ಯ

Vijayapura - Desk - Doddanagouda Gudihindin

ಜಮಖಂಡಿ: ಸತ್ಸಂಗದಿಂದ ಜೀವನದ ಬಂಧಗಳಿಂದ ಮುಕ್ತರಾಗಬಹುದು ಎಂದು ಶಿರೋಳ ರಾಮಾರೂಢ ಮಠದ ಶಂಕರಾರೂಢ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ಗುರುದೇವ ಸತ್ಸಂಗ ೆ.23ರ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬರುವಾಗ ಏನೂ ತಂದಿಲ್ಲ, ಹೋಗುವಾಗ ಏನೂ ಒಯ್ಯುವುದಿಲ್ಲ ಎಂಬ ಭಾವ ಮೂಡಿದರೆ ನಿರ್ಮೋಹಿಗಳಾಗಬಹುದು. ಗುರುಗಳ ಹತ್ತಿರ ಹೋಗಿ ಬಂಧನದಿಂದ ಹೇಗೆ ಮುಕ್ತರಾಗುವುದು ಎಂದು ಕೇಳಿದರೆ ಉಪದೇಶಾಮೃತ ಕರುಣಿಸುತ್ತಾರೆ ಎಂದರು.

ಗುರುದೇವಾಶ್ರಮದ ಹರ್ಷಾನಂದ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಹಲವಾರು ಮುಖವಾಡ ಧರಿಸಿ ಪಾತ್ರ ಮಾಡುತ್ತಿದ್ದರು, ಪಾತ್ರ ನನ್ನದಲ್ಲ ಎಂಬ ಭಾವನೆ ಇರಬೇಕು. ಆಗ ಮಾತ್ರ ಮೋಹ ಕಳೆಯಲು ಸಾಧ್ಯ ಎಂದರು.

ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದ ಡಾ.ಟಿ.ಪಿ. ಗಿರಡ್ಡಿ- ಶ್ರೀಮತಿ ಗಿರಡ್ಡಿ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ರಾಮಚಂದ್ರ ಹೂಗಾರ, ಶಿವಾನಂದ ಬಾಡನವರ, ಪರಮೇಶ್ವರ ತೇಲಿ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪುಂಡಲೀಕ ಭಜಂತ್ರಿ ಕ್ಲಾರಿನೇಟ್ ನುಡಿಸಿದರು. ಬಿ.ಬಿ. ಮೆಳ್ಳಿಗೇರಿ ಅನುಭಾವ ಗೀತೆ ಹಾಡಿದರು. ಪ್ರತೀಕ್ಷಾ, ಆರಾಧ್ಯ ವಚನ ಪ್ರಾರ್ಥನೆ ಗೀತೆ ಹೇಳಿದರು.

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.