ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಬೂಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹು-ಧಾ ಮಹಾನಗರದಲ್ಲಿ ನೂತನ ಕಟ್ಟಡ ಎತ್ತರದ ಮಿತಿ 15 ಮೀಟರ್ಗೆ ಹೆಚ್ಚಿಸಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದಿಂದ ಈಡೇರಿದ್ದು, ಪಾಲಿಕೆ ಅಧಿಕಾರಿಗಳು ‘ನಿರ್ಮಾಣ್ -2’ ಸಾಫ್ಟ್ವೇರ್ನಲ್ಲಿ ಇದನ್ನು ಅಳವಡಿಸಿಕೊಂಡು ಜಾರಿ ಮಾಡಿಲ್ಲ. ಹಾಗಾಗಿ, 180ಕ್ಕೂ ಹೆಚ್ಚು ಹೊಸ ವಸತಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ.
ಹು-ಧಾ ಮಹಾನಗರದಲ್ಲಿ ವಸತಿ ನಿರ್ವಣದ ಮಿತಿಯನ್ನು ಹನ್ನೊಂದೂವರೆ ಮೀಟರ್ನಿಂದ ಹದಿನೈದು ಮೀಟರ್ಗೆ ಹೆಚ್ಚಿಸಬೇಕೆಂಬ ವರದಿಯನ್ನು ಕ್ರೆಡೈ ಮಂಡಿಸಿತ್ತು. ಈ ಕುರಿತು ರಾಜ್ಯ ಸರ್ಕಾರ 2021ರ ನವೆಂಬರ್ 11ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಕಟ್ಟಡ ವನ್ನು ಮಿತಿಯನ್ನು 15 ಮೀಟರ್ವರೆಗೆ ಕಟ್ಟಲು ಅನುಮತಿಸಿದೆ. ಆದರೆ, ಮಹಾನಗರ ಪಾಲಿಕೆಯು ನಿರ್ವಣ್-2 ಸಾಫ್ಟ್ವೇರ್ನಲ್ಲಿ ಇದನ್ನು ಅಳವಡಿಸಿಲ್ಲ. ಹಾಗಾಗಿ ಜಾರಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಬಸ್ ‘ವೇ’, ಶೆಲ್ಟರ್ ಹಾಗೂ ನೀರಿನ ಟ್ಯಾಂಕ್ ಅಳವಡಿಸುವುದನ್ನು 10 ಎಕರೆ ಬದಲಾಗಿ 25 ಎಕರೆ ಹಾಗೂ ಅದಕ್ಕೆ ಮಿಕ್ಕಿದ ಕ್ಷೇತ್ರಕ್ಕೆ ಅಳವಡಿಸುವಂತಾಗಬೇಕು. ಸಿಂಗಲ್ ಯೂನಿಟ್ ಲೇಔಟ್ಗೆ ನೀಡಿದ ಮಿತಿ ತೆಗೆದುಹಾಕಬೇಕು. ಉದ್ದಿಮೆ ಹೊರತುಪಡಿಸಿ ಕಟ್ಟಡಗಳ ನಿರ್ಮಾಣ ಮಿತಿ 15 ಮೀಟರ್ ಒಳಗಡೆ ಇರುವಂಥ ವಸತಿ/ವ್ಯಾಪಾರಿ ಕಟ್ಟಡಗಳಿಗೆ ಮುಂದುವರಿಯಬೇಕು. ಕಟ್ಟಡದ ಕಾರಿಡಾರ್ ಕ್ಷೇತ್ರವನ್ನು ಕೂಡ ಎಫ್ಎಆರ್ ಕಮ್ಯೂಟೇಷನ್ನಿಂದ ಹೊರಗಿಡಬೇಕು. ಹು-ಧಾ ಮಹಾನಗರದಲ್ಲಿ ಈಗ ಶೇ. 80ರಂತೆ 9 ಮೀಟರ್ ಅಗಲದ ರಸ್ತೆಗಳಿವೆ. ಕಾರಣ ಈಗಿರುವ ಸ್ಥಿತಿಯಲ್ಲಿ 12 ಮೀಟರ್ ಮಿತಿ ಪ್ರಾಯೋಗಿಕವಾಗಿ ಕಠಿಣ. ಆದ್ದರಿಂದ ಈ ಮಿತಿ 9 ಮೀಟರ್ಗೆ ಕಡಿತಗೊಳಿಸಬೇಕು. ರಿಟೇಲ್ ಬಿಜಿನೆಸ್ ಮಳಿಗೆ, ಶಾಪಿಂಗ್ ಕಾಂಪ್ಲೆಕ್ಸ್ನ ರ್ಪಾಂಗ್ ಕ್ಷೇತ್ರ 75 ಚ.ಮೀಟರ್ ಇಡಬೇಕು ಎಂಬ ಬೇಡಿಕೆಯನ್ನು ಕ್ರೆಡೈ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.
ನಗರಾಭಿವೃದ್ಧಿ ಸೇರಿದಂತೆ ಇತರ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯಗಳನ್ನು ಕೂಲಂಕಷವಾಗಿ ರ್ಚಚಿಸಲಾಗಿದೆ. 12 ಮೀ., 12ಮೀ.ಗಿಂತ ಹೆಚ್ಚಿನ ಹಾಗೂ 15 ಮೀ.ವರೆಗಿನ ಕಟ್ಟಡದ ಎಲ್ಲ ಬದಿಗಳಲ್ಲಿ ಕನಿಷ್ಠ 4 ಮೀ. ಜಾಗ ಮೀಸಲಿಡಬೇಕು. 400 ಚ.ಮೀ. ವರೆಗೆ ನಿವೇಶನ ಅಳತೆಯಲ್ಲಿ 9 ಮೀ. ರಸ್ತೆ ಅಗಲ, ಕಟ್ಟಡದ ಎತ್ತರ 12 ಮೀ. ಇರಬೇಕು. 400-1000 ಚ.ಮೀ. ನಿವೇಶನಕ್ಕೆ ಕನಿಷ್ಠ 9 ಮೀ. ರಸ್ತೆ ಅಗಲ, 15 ಮೀ. ಕಟ್ಟಡದ ಎತ್ತರ, 1000 ಚ.ಮೀ. ಮೇಲ್ಪಟ್ಟ ನಿವೇಶನಕ್ಕೆ ಕನಿಷ್ಠ 9 ಮೀ. ರಸ್ತೆ ಅಗಲ ಹಾಗೂ 15 ಮೀ.ವರೆಗೆ ಕಟ್ಟಡದ ಎತ್ತರ ಇರಬೇಕು. ವಾಣಿಜ್ಯ ಮಳಿಗೆಗಳು, ಮಾಲ್ಗಳ ಬಳಕೆಯ ಪ್ರಕಾರ ವಾಹನ ನಿಲುಗಡೆಗೆ 75 ಚ.ಮೀ. ನೆಲ ವಿಸ್ತೀರ್ಣ ಇರಬೇಕು. ಬಹು ವಸತಿ ಸಂಕೀರ್ಣ, ಅಪಾರ್ಟ್ವೆುಂಟ್ಗಳು 75 ಚ.ಮೀ.ಅಥವಾ ಅದಕ್ಕಿಂತ ಕಡಿಮೆ, 1 ಕಾರ್ ರ್ಪಾಂಗ್, 75 ಚ.ಮೀ.ಗಿಂತ ಹೆಚ್ಚು ಮತ್ತು 150 ಚ.ಮೀ. ವರೆಗೆ, 1 ಕಾರ್ ರ್ಪಾಂಗ್ ನಿರ್ಮಾಣ ಮಾಡುವ ಕುರಿತು ಗೆಜೆಟ್ ನೋಟಿಫಿಕೇಷನ್ನಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವುದು ಕ್ರೆಡೈ ಪದಾಧಿಕಾರಿಗಳ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಹೊಸ ಸಾಫ್ಟ್ ವೇರ್ನಲ್ಲಿ ನೋಟಿಫಿಕೇಷನ್ ಅಳವಡಿಸಿದರೆ, ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ತ್ವರಿತಗೊಳ್ಳಲಿವೆ. ಪ್ರತಿಯೊಬ್ಬರೂ ಮನೆ, ನಿವೇಶನ, ಅಪಾರ್ಟ್ವೆುಂಟ್ ಖರೀದಿಗೆ ದುಂಬಾಲು ಬೀಳಲಿದ್ದಾರೆ. ಜತೆಗೆ ರಾಜ್ಯದ ಬೊಕ್ಕಸಕ್ಕೂ ಆದಾಯ ಹರಿದು ಬರಲಿದೆ. ಇದೆಲ್ಲವೂ ರಾಜ್ಯ ಸರ್ಕಾರದ ಗಮನಕ್ಕಿದೆ. ಜಾರಿಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ಕಿವಿ ಹಿಂಡುವಲ್ಲಿ ಹಿಂದುಳಿದಿದೆ.
ಜನಪ್ರತಿನಿಧಿಗಳು ಕೆಲಸ ಮಾಡಲಿ: ಒಂದೂವರೆ ವರ್ಷದಿಂದ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ತೀವ್ರ ತರಹದ ಒತ್ತಡ ಹೇರಲಾಗಿತ್ತು. ಯಾಕೆಂದರೆ, ಬೃಹತ್ ಕೈಗಾರಿಕೆಗಳು ಮಹಾನಗರಕ್ಕೆ ಆಗಮಿಸುತ್ತಿವೆ. ರೈಲ್ವೆ, ವಿಮಾನ ನಿಲ್ದಾಣ, ಅದ್ಭುತ ರಸ್ತೆಗಳು ಇಲ್ಲಿವೆ. ಬೃಹತ್ ಕಟ್ಟಡಗಳ ನಿರ್ವಣದಿಂದ ರಿಯಲ್ ಎಸ್ಟೇಟ್ ಉದ್ಯಮ ಇನ್ನಷ್ಟು ಬೆಳೆಯಲಿದೆ. ಪ್ರವಾಸೋದ್ಯಮ ಕ್ಷೇತ್ರವೂ ವಿಸ್ತರಿಸಲಿದೆ. ಜನಪ್ರತಿನಿಧಿಗಳು ಇದಕ್ಕೆ ಪೂರಕವಾದ ಕೆಲಸ ಮಾಡಬೇಕಿದೆ.
ಹು-ಧಾ ಮಹಾನಗರದ ಸೌಂದರ್ಯ ಹೆಚ್ಚಲು ಕಟ್ಟಡ ನಿರ್ವಣದ ಅಗತ್ಯವಿದೆ. 180ಕ್ಕೂ ಹೆಚ್ಚು ಹೊಸ ವಸತಿ ಯೋಜನೆಗಳು ಸಿದ್ಧವಾಗಿವೆ. ಕಟ್ಟಡ ಮಿತಿಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ನಿರ್ಮಾಣ್ -2 ಸಾಫ್ಟ್ವೇರ್ನಿಂದ ಜಾರಿಯಾಗಿಲ್ಲ. ಈ ಸಮಸ್ಯೆ ಬಗೆಹರಿದರೆ, ರಾಜ್ಯದ ಬೊಕ್ಕಸ ಭರ್ತಿಯಾಗಲಿದೆ. | ಪ್ರದೀಪ ರಾಯ್ಕರ್, ಕ್ರೆಡೈ ಸಂಯೋಜಿತ ರಾಜ್ಯಾಧ್ಯಕ್ಷ ಕಟ್ಟಡ ಮಿತಿಯನ್ನು 15 ಮೀ.ಗೆ ಹೆಚ್ಚಿಸಿ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ರಾಜ್ಯ ಸರ್ಕಾರ ಈ ಕುರಿತು ಆದೇಶವನ್ನೂ ಹೊರಡಿಸಿದೆ. ಬಿಲ್ಡರ್ಗಳ ಜತೆಗೆ ಈ ಕುರಿತು ರ್ಚಚಿಸಿದ್ದೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಾಗಿಲ್ಲ ಎಂಬುದು ನನ್ನ ಗಮಕ್ಕೆ ಬಂದಿಲ್ಲ. ಮನವಿ ಕೊಟ್ಟರೆ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು. | ಬಿ.ಎ. ಬಸವರಾಜ, ನಗರಾಭಿವೃದ್ಧಿ ಸಚಿವ
ಸ್ಟಾಲ್ಗಳಿಗಾಗಿ ಸಂಪರ್ಕಿಸಿ
ಪ್ರಾಪರ್ಟಿ ಎಕ್ಸ್ಪೋದಲ್ಲಿ ಕೆಲವೇ ಸ್ಟಾಲ್ಗಳು ಉಳಿದಿದ್ದು, ಆಸಕ್ತರು ಸ್ಟಾಲ್ಗಳಿಗಾಗಿ ಮೊ. 98869 22116 ಅಥವಾ 88844 32303 ಸಂರ್ಪಸಬಹುದು.
ಸ್ಥಳ: ರಾಯ್ಕರ ಗ್ರೌಂಡ್ ವಿದ್ಯಾನಗರ, ಹುಬ್ಬಳ್ಳಿ
ದಿನಾಂಕ: ಏ. 22, 23, 24