ಸಚಿವ ಮುರುಗೇಶ ನಿರಾಣಿ  
ಜಿಲ್ಲೆ

ನಿರಾಣಿ ಕಾರ್ಖಾನೆ ಎದುರು ಮಾತ್ರ ಪ್ರತಿಭಟನೆ ಆಗುತ್ತೆ?

ಸಂತೋಷ ದೇಶಪಾಂಡೆ

ಬಾಗಲಕೋಟೆ: ಇಡೀ ಜಗತ್ತಿನಲ್ಲಿ ನೀವು ನೋಡಿದ್ದಿರಿ. ಏನೇ ಹೋರಾಟ, ಪ್ರತಿಭಟನೆ ಮಾಡಿದರು ತಹಸೀಲ್ದಾರ, ಡಿಸಿ ಕಚೇರಿ ಎದುರು ಹೋರಾಟ ಮಾಡುತ್ತಾರೆ. ಪಕ್ಕದ ಬೆಳಗಾವಿ ಹಾಗೂ ಜಿಲ್ಲೆಯ ಉಳಿದ ಭಾಗದಲ್ಲಿ ಪ್ರತಿಭಟನೆ ಆಗಲ್ಲ. ಮುಧೋಳದಲ್ಲಿ ಮಾತ್ರ ನಿರಾಣಿ ಶುಗರ್ ಫ್ಯಾಕ್ಟರಿ ಎದುರಿಗೆ ಹೋರಾಟ ಆಗುತ್ತದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಧೋಳ ದಲ್ಲಿ ೫೩ ದಿನ ನಡೆದಿದ್ದ ಕಬ್ಬು ಬೆಳೆಗಾರರ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಭಗವಂತ ಎಷ್ಟು ಬುದ್ದಿವಂತ ಇರ್ತಾನ ಅಂದ್ರೆ. ಪ್ರತಿವರ್ಷ ಒಂದು, ಎರಡು ಕಾರ್ಖಾನೆ ಆಶೀರ್ವಾದ ಮಾಡ್ಕೊಂತ ಬಂದಾನ. ಹೋರಾಟ ಮಾಡಿದ್ದರಿಂದ ಈ ಹತ್ತು ವರ್ಷದಲ್ಲಿ ೨೧ ಶುರು ಮಾಡಿದ್ದೇನೆ. ಅದು ಮುಧೋಳದರ ಆಶೀರ್ವಾದದಿಂದ ಎಂದ ಅವರು, ಮಹಾರಾಷ್ಟ್ರದಲ್ಲಿ ದೇವೇಂದ್ರ ಪಡ್ನವಿಸ್ ೧೦ ಸಾವಿರ ಟನ್ ಸಾಮರ್ಥ್ಯದ ಕಿ ಕೊಟ್ಟಿದ್ದಾರೆ. ನಮಗೇನು ಕೊಡಬೇಡಪ್ಪ ನೀನು ರೈತರಿಗೆ ಒಳ್ಳೆ ಬಿಲ್ ಕೊಡು ನಡೆಸು ಅಂತ ಹೇಳಿದ್ದಾರೆ.
ಈಗ ಡಿಸೆಂಬರ್ ೧೫ ಕ್ಕೆ ಅದರ ಉದ್ಘಾಟನೆ ಇದೆ. ಎಲ್ಲರನ್ನು ಆಹ್ವಾನಿಸುತ್ತೇನೆ ಅಂತ ಹೇಳುವ ಮೂಲಕ ರೈತರ ಪ್ರತಿಭಟನೆಗೆ ಟಾಂಗ್ ನೀಡಿದರು.