ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಗುಡ್ಡದಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿದೆ. ಈ ಕುರಿತ ಮಾಹಿತಿಯನ್ನು ಅರಣ್ಯಾಧಿಕಾರಿ ರಾಜೇಶ ನಾಯಕಗೆ ಗ್ರಾಮಸ್ಥರು ಸೋಮವಾರ ನೀಡಿದ್ದಾರೆ. ಗುಡ್ಡದಲ್ಲಿ ಚಿರತೆಯ ಚಲನವಲನಗಳನ್ನು ಗ್ರಾಮಸ್ಥರು ಮೊಬೈಲ್ನಲ್ಲಿ ಸೆರೆ ಹಿಡಿದು ಅರಣ್ಯಾಧಿಕಾರಿಗೆ ರವಾನಿಸಿದ್ದಾರೆ. ಇದರಿಂದಾಗಿ ಚಿರತೆ ಸೆರೆ ಹಿಡಿಯಲು ಬೋನು ತರಿಸಲಾಗಿದೆ. ಚಿರತೆ ಸೆರೆಗೆ ಗ್ರಾಮಸ್ಥರ ಸಹಕಾರ ಅಗತ್ಯ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಡ್ಡದ ಕಡೆ ಬರಬಾರದು. ಹೆಚ್ಚು ಜನರಿದ್ದರೆ ಚಿರತೆ ಗುಡ್ಡದಿಂದ ಹೊರಬರುವ ಸಾಧ್ಯತೆ ಇರುವುದಿಲ್ಲ ಎಂದು ರಾಜೇಶ ನಾಯಕ ತಿಳಿಸಿದ್ದಾರೆ.