ಬೋರಗಾಂವ: ನಿಪ್ಪಾಣಿಯನ್ನು ಮಾದರಿ ಕ್ಷೇತ್ರವಾಗಿಸಲು ರಸ್ತೆ, ನೀರು, ಶಿಕ್ಷಣ, ವಿವಿಧ ಸೌಲಭ್ಯಗಳ ಜತೆ ಸಾಮಾನ್ಯ ಜನರ ಆರೋಗ್ಯದ ಹಿತ ಕಾಪಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಜನರಹಿತಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಬೋಜ್ ಕ್ರಾಸ್ ಬಳಿ ಭೋಜ, ಬೇಡಕಿಹಾಳ, ಬೋರಗಾಂವ ಗ್ರಾಮಗಳಿಗೆ ಸಿಆರ್‌ಎ್ ಯೋಜನೆಯಡಿ 4.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವದ್ಧಿಗೆ ಅನುದಾನ ನೀಡುತ್ತಿಲ್ಲ. ಹೀಗಿರುವಾಗ ಬೇರೆ ಬೇರೆ ಇಲಾಖೆಗೆ ಹೋಗಿ ಅಲ್ಲಿಂದ ಅನುದಾನ ತರುವುದು ಕಷ್ಟವಾಗಿದೆ ಎಂದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಜಯಕುಮಾರ ಖೋತ, ಅಪ್ಪಾಸಾಹೆಬ ಜೊಲ್ಲೆ, ಶರದ ಜಂಗಟೆ, ಸುದರ್ಶನ ಮುರಾಬಟ್ಟೆ, ಅನ್ನಾಸಾಹೆಬ ಪಾಟೀಲ, ಭರತ ಗುರವ, ಸಂತೋಷ ಚವಾನ, ಮಿಥುನ ಪಾಟೀಲ, ಸುರೇಶ ದೇಸಾಯಿ, ರಾಜು ಭದರಗಡೆ, ಅಣ್ಣಾಸಾಹೇಬ ಪಾಟೀಲ, ಸಿದ್ದು ನರುಟೆ ಇದ್ದರು. ಬಾಳಾಸಾಹೇಬ ಶಿಂಧೆ ವಂದಿಸಿದರು.