ಜಿಲ್ಲೆ

ನಿಮ್ಹಾನ್ಸ್ ಚಟುವಟಿಕೆ ವಿಸ್ತರಣೆ ಅಗತ್ಯ: ಸಂಸ್ಥಾಪನಾ ದಿನಾಚರಣೆಯಲ್ಲಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ

Mandara

ಬೆಂಗಳೂರು: ರಾಜ್ಯದ ಇತರೆ ಭಾಗಗಳಿಗೂ ನಿಮ್ಹಾನ್ಸ್ ಕಾರ್ಯ ಚಟುವಟಿಕೆ ವಿಸ್ತರಿಸುವ ಅಗತ್ಯವಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಮ್ಹಾನ್ಸ್ ಸಂಸ್ಥಾಪನ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಕಾಯಿಲೆಗಳಿಂದ ರೋಗಿಗಳು ಮಾತ್ರವಲ್ಲದೆ ಕುಟುಂಬದ ಸದಸ್ಯರೂ ತೊಂದರೆ ಅನುಭವಿಸಬೇಕು. ಮನೋರೋಗಕ್ಕೆ ಗುಣಮಟ್ಟದ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ನಿಮ್ಹಾನ್ಸ್ ಕಾರ್ಯ ಚಟುವಟಿಕೆಯನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸುವ ಅಗತ್ಯವಿದೆ. ಇದರಿಂದ ನಿಮ್ಹಾನ್ಸ್ ಮೇಲಿರುವ ಒತ್ತಡ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದರು.

ನಮಾಮಿ ಆರೋಗ್ಯ ಕೇಂದ್ರ: ಮಾನಸಿಕ ಅರೋಗ್ಯಕ್ಕೆ ಅಗತ್ಯ ಚಿಕಿತ್ಸೆ ನೀಡಲು ‘ನಮಾಮಿ ಆರೋಗ್ಯ ಕೇಂದ್ರ’ ತೆರೆಯಲಾಗುವುದು. ಜತೆಗೆ ನಿಮ್ಹಾನ್ಸ್ ಆವರಣದಲ್ಲಿ ಧರ್ಮಶಾಲೆ ಅಗತ್ಯವಿದ್ದು, ಇದರ ಸ್ಥಾಪನೆ ಕುರಿತು ಸರ್ಕಾರದ ಮಟ್ಟದಲ್ಲಿ ರ್ಚಚಿಸಲಾಗುವುದು ಎಂದರು.

ಡಿಜಿಟಲ್ ಅಕಾಡೆಮಿ: ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಮಾತನಾಡಿ, ಸಂಸ್ಥೆಯಲ್ಲಿ ಅರಿವು ಕೇಂದ್ರ ಮತ್ತು ಡಿಜಿಟಲ್ ಅಕಾಡೆಮಿ ಸ್ಥಾಪಿಸಲಾಗುವುದು ಎಂದರು.

ಹ್ಯೂಮನ್ ಜೀನೋಬ್ ಲ್ಯಾಬ್ (ವಂಶವಾಹಿ ಸೋಂಕು ಪತ್ತೆ ಹಚ್ಚುವ), ಆಟೋ ಇಮ್ಯುನ್ ಲ್ಯಾಬ್ (ದೇಹಕ್ಕೆ ವಿರುದ್ಧವಾದ ಆಂಟಿಬಾಡಿಸ್​ಪತ್ತೆ ಹಚ್ಚುವ) ಮತ್ತು ನ್ಯೂರೋ ಇನ್ಪೆಕ್ಷನ್ ಲ್ಯಾಬ್ (ಸೋಂಕು ಪತ್ತೆ ಹಚ್ಚುವ) ಲೋಕಾರ್ಪಣೆ ಮಾಡಲಾಯಿತು.

ನಿಮ್ಹಾನ್ಸ್​ನಲ್ಲಿ ಅಪಘಾತ ಹಾಗೂ ತುರ್ತು ಚಿಕಿತ್ಸೆ ಜತೆಗೆ ಮನೋರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನೂ ನೀಡಲಾಗುತ್ತಿರುವು ದರಿಂದ ಒತ್ತಡ ಹೆಚ್ಚಿದೆ. ಹೀಗಾಗಿ ಕೆ.ಆರ್. ಪುರದಲ್ಲಿ ಟ್ರಾಮಾ ಸೆಂಟರ್ ನಿರ್ವಿುಸಲು ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು. ಇದರಿಂದ ಸಂಸ್ಥೆಗೆ ಈಗಿರುವ ಒತ್ತಡ ಕಡಿಮೆಯಾಗಲಿದೆ. | ಡಾ.ಕೆ. ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ