ಮೈಸೂರು: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೈಸೂರಿನ ವೇಟ್ ಲಿಫ್ಟರ್‌ಗಳಾದ ನಿಖಿಲ್ ಅರುಣ್ ಕಾಟ್ಕರ್ ಹಾಗೂ ಡಾ.ಪಿನಾಕಿನ್ ಅಯಾರೆ ಪದಕಗಳಿಸಿ ಗಮನ ಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸಂಸ್ಥೆ, ಮಂಗಳೂರು ಹಾಗೂ ದಾವಣಗೆರೆ ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಲಕ್ಷ್ಮೀಕಾಂತನಗರದ ಅರುಣ್ ಕಾಟ್ಕರ್, ಸುಜಾತ ದಂಪತಿಯ ಪುತ್ರರಾದ ನಿಖಿಲ್ ಅರುಣ್ ಕಾಟ್ಕರ್ 105 ಕೆ.ಜಿ.ವಿಭಾಗದಲ್ಲಿ 95 ಕೆ.ಜಿ.ತೂಕ ಲಿಫ್ಟ್ ಮಾಡುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ. ನಿಖಿಲ್ ಗುರುಗಳಾದ ಡಾ.ಪಿನಾಕಿನ್ ಅಯಾರೆ ಹಿರಿಯರ 83 ಕೆ.ಜಿ.ವಿಭಾಗದಲ್ಲಿ 145 ಕೆ.ಜಿ. ಲಿಫ್ಟ್ ಮಾಡುವ ಮೂಲಕ ಬೆಳ್ಳಿ ಪದಕಗಳಿಸಿದ್ದಾರೆ ಎಂದು ಮೈಸೂರು ನಗರ ಬಿಜೆಪಿ ಯುವಾ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.