ಜಿಲ್ಲೆ

ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆಬಾಗಲೇಬೇಕು

ಶಿರಾ: ಕೇತಗಾನಹಳ್ಳಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿಗೆ ನ್ಯಾಯಾಲಯದಲ್ಲಿ ರಿಲ್​ೀ ಸಿಕ್ಕಿದ್ದು ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆಬಾಗಲೇಬೇಕು ಎಂದು ಜೆಡಿಎಸ್​ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಜಮೀನು ವಿವಾದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಹೆಚ್ಚೇನು ಚರ್ಚೆ ಮಾಡುವುದಿಲ್ಲ. ಕೋರ್ಟ್​ ನಿರ್ದೇಶನಕ್ಕೆ ಎಲ್ಲರು ತಲೆಬಾಗಬೇಕು ಎಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎಸ್​ಐಟಿ ಅನ್ನುವುದನ್ನು ಸರ್ಕಾರ ಯಾವ ರೀತಿ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಅನ್ನುವ ಅನೇಕ ನಿರ್ದೇಶನ ನಮ್ಮ ಮುಂದೆ ಇದೆ. ಎಸ್​ಐಟಿ ಹಾಗೂ ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಲು ಸರ್ಕಾರ ಅವಕಾಶ ಕೊಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡಲು ಬಿಡಬೇಕು. ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೆಲ ರಾಜಕೀಯವ್ಯಕ್ತಿಗಳನ್ನ ಬಲಿಪಶು ಮಾಡಲು ಎಸ್​ಐಟಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಕೇತಗಾನಹಳ್ಳಿ ಕೂಡ ಒಂದು. ಇಂತಹ ದ್ವೇಷದ ರಾಜಕಾರಣ ಮೂರು ಪಕ್ಷಕ್ಕೂ ಒಳ್ಳೆಯದಲ್ಲ. ಇದರಿಂದ ಸಾಧನೆ ಮಾಡುವಂತಹದ್ದು ಏನು ಇಲ್ಲ ಎಂದರು.

ಅವಕಾಶ ಸಿಕ್ಕಾಗ ಜನಗಳ ಪರವಾಗಿ ಒಳ್ಳೆಯಕೆಲಸ ಮಾಡಿ. ನೀವು ಈ ರೀತಿ ದ್ವೇಷ ಮಾಡಿಕೊಂಡು ಹೋದರೇ, ನೀವು ಹಾಕಿ ಕೊಟ್ಟ ಹಾದಿಯಲ್ಲೇ ಮುಂಬರುವ ಹೊಸ ಸರ್ಕಾರ ಅನುಸರಣೆ ಮಾಡಬೇಕಾಗುತ್ತದೆ. ಇವತ್ತಿನ ನ್ಯಾಯಾಲಯದ ತೀರ್ಪಿನಿಂದ ಸರ್ಕಾರ ಎಚ್ಚೆತ್ತುಕೊಂಡರೇ ಸಾಕು ಎಂದು ತಿವಿದರು.