ಮದ್ದೂರು ಪಟ್ಟಣದ ಪ್ರವಾಸಿ ಮಂದಿರಕ್ಕೆ ನಿಖಿಲ್‌ಕುಮಾರ್‌ಸ್ವಾಮಿ ಆಗಮಿಸಿದಾದ ಕ್ರೇನ್ ಮೂಲಕ ಬೃಹತ್ ಗಾತ್ರದ ಪೈನಾಪಲ್ ಹಾರ ಹಾಕಿ ಸ್ವಾಗತಿಸಲಾಯಿತು. ವಿವೇಕಾನಂದ, ಡಿ.ಸಿ.ತಮ್ಮಣ್ಣ, ಅನ್ನದಾನಿ, ರಾಜಣ್ಣ, ಪ್ರಿಯಾಂಕಾ ಅಪ್ಪುಗೌಡ ಇದ್ದರು. 
ಜಿಲ್ಲೆ

ಮದ್ದೂರಿನಲ್ಲಿ ನಿಖಿಲ್‌ಗೆ ಅದ್ದೂರಿ ಸ್ವಾಗತ

ವಸಂತಕುಮಾರ್ ಬಿ

ಮದ್ದೂರು: ತಾಲೂಕಿನ ಗಡಿಭಾಗ ನಿಡಘಟ್ಟ ಗ್ರಾಮಕ್ಕೆ ಭಾನುವಾರ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರ್‌ಸ್ವಾಮಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಮುತ್ತು ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.

ನಿಡಘಟ್ಟದಿಂದ ಪಟ್ಟಣದ ಪ್ರವಾಸಿ ಮಂದಿರದವರೆಗೆ ನೂರಾರು ಬೈಕ್‌ಗಳಲ್ಲಿ ಹಮ್ಮಿಕೊಂಡಿದ್ದ ಬೈಕ್ ಜಾಥ್ ಹಮ್ಮಿಕೊಳ್ಳಲಾಗಿತ್ತು. ನಿಖಿಲ್‌ಕುಮಾರ್‌ಸ್ವಾಮಿ ಬೈಕ್ ಜಾಥಾದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ನಿಡಘಟ್ಟ, ಕೊಲ್ಲಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ನಿಖಿಲ್ ಕುಮಾರ್‌ಸ್ವಾಮಿ ಅವರಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.

ಪಟ್ಟಣದ ಪ್ರವಾಸಿ ಮಂದಿರಕ್ಕೆ ನಿಖಿಲ್‌ಕುಮಾರ್‌ಸ್ವಾಮಿ ಆಗಮಿಸಿದಾಗ ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ದಂಪತಿ ನೇತೃತ್ವದಲ್ಲಿ ತೆರದ ವಾಹನದ ಮೇಲಿದ್ದ ಪುಷ್ಪವೃಷ್ಟಿ ಸುರಿಸಿ, ಕ್ರೇನ್ ಮೂಲಕ ಬೃಹತ್ ಗಾತ್ರದ ಪೈನಾಪಲ್ ಹಾರ ಹಾಕಿದರು. ಜತೆಗೆ ವಿವಿಧ ಪ್ರಕಾರಗಳ ಜಾನಪದ ಕಲಾ ತಂಡಗಳೊಂದಿಗೆ ನಿಖಿಲ್‌ಗೆ ಅದ್ದೂರಿ ಸ್ವಾಗತ ಕೋರಿದ್ದು ಗಮನ ಸೆಳೆಯಿತು.

ಮಾರ್ಗ ಮಧ್ಯೆ ಟೀ ಹೋಟೆಲ್‌ನಲ್ಲಿ ಟೀ ಸೇವಿಸುವ ಮೂಲಕ ನಿಖಿಲ್ ಹಾಗೂ ಗಣ್ಯರು ಗಮನ ಸೆಳೆದರು. ನಂತರ ಭಾರತೀನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡುವ ಕಾರ್ಯಕ್ರಮಕ್ಕೆ ತೆರಳಿದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಜೆಡಿಎಸ್ ಮಹಿಳಾ ಅಧ್ಯಕ್ಷೆ ದಿವ್ಯಾ ರಾಮಚಂದ್ರ, ಪುರಸಭಾ ಸದಸ್ಯರಾದ ಪ್ರಿಯಾಂಕಅಪ್ಪುಗೌಡ, ಮನೋಜ್, ಎಂ.ಐ.ಪ್ರವೀಣ್, ಮುಖಂಡರಾದ ಚಾಮನಹಳ್ಳಿ ಸ್ವಾಮಿ, ಅಪ್ಪುಪಿ.ಗೌಡ, ಕೂಳಗೆರೆ ಶೇಖರ್ ಇತರರು ಇದ್ದರು.