ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ಮಂಡಳಿ ನಿರ್ದೇಶಕ ಗಂಗಾಧರ ದೊಡವಾಡ ಅವರನ್ನು ಬೆಂಗಳೂರು ವೇದವ್ಯಾಸ ಪೀಠದಿಂದ ಕೊಡ ಮಾಡುವ ನಿಜಶರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಳೇಹುಬ್ಬಳ್ಳಿ ಗಣೇಶನಗರದ ಶ್ರೀ ಶಬರೀಶ್ವರ ಅಯ್ಯಪ್ಪಸ್ವಾಮಿ ಸನ್ನಿಧಾನ ವೇದಿಕೆಯಲ್ಲಿ ಜಾಗೃತ ಶ್ರೀ ಧರ್ಮಶಾಸ್ತ್ರ ಸಿದ್ಧೀಪಿಠ ಹಾಗೂ ಬೆಂಗಳೂರಿನ ಬ್ರಹ್ಮರ್ಷಿ ವೇದವ್ಯಾಸ ಪೀಠದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ ವಿದ್ಯಾಶ್ರಮದ ಜಗದ್ಗುರು ಶ್ರೀ ಷಡಕ್ಷರಿ ಸ್ವಾಮೀಜಿ, ಬ್ರಹ್ಮರ್ಷಿ ಶ್ರೀರಾಜು ಸ್ವಾಮೀಜಿ, ಅಹಿಂದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ದ್ಯಾಮಣ್ಣ ದುಂಡಿ, ಚನ್ನಬಸಮ್ಮ ತಳವಾರ, ಚನ್ನಬಸಪ್ಪ ಎಲಿಗಾರ ಇತರರು ಇದ್ದರು.