ಜಿಲ್ಲೆ

ಉಡುಪಿಯಲ್ಲಿ ಇಂದಿಗೆ ರಾತ್ರಿ ಕರ್ಫ್ಯೂ, ಸಂಡೆ ಲಾಕ್‌ಡೌನ್ ಮುಕ್ತಾಯ

Udupi

ಉಡುಪಿ: ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಜಿಲ್ಲೆಯೊಳಗೆ ಕಂಟೈನ್‌ಮೆಂಟ್ ವಲಯ ಹೊರತು ಪಡಿಸಿ ಜುಲೈ31ರ ಬಳಿಕ ರಾತ್ರಿ ಕರ್ಫ್ಯೂ, ಸಂಡೆ ಲಾಕ್‌ಡೌನ್ ಇರುವುದಿಲ್ಲ.

ಅಂಗಡಿ, ಮುಂಗಟ್ಟು ಹೋಟೆಲ್ ಸೇರಿದಂತೆ ಇತರೆ ವ್ಯಾಪಾರ ಚಟುವಟಿಕೆಗಳಿಗೆ ರಾತ್ರಿ 9 ಗಂಟೆ ಕೊನೆಯಾಗಿತ್ತು. ಪ್ರತೀ ಭಾನುವಾರ ಲಾಕ್‌ಡೌನ್ ಸಹ ಜಾರಿಯಲ್ಲಿದ್ದು, 4 ಭಾನುವಾರ ಲಾಕ್‌ಡೌನ್ ವ್ಯವಸ್ಥಿತವಾಗಿ ಪಾಲಿಸಲಾಗಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ ಭಾನುವಾರ ಲಾಕ್‌ಡೌನ್ ಇರುವುದಿಲ್ಲ.

ಸೋಂಕು ಹರಡುವುದನ್ನು ನಿಯಂತ್ರಿಸಲು ಕಂಟೈನ್‌ಮೆಂಟ್ ವಲಯದಲ್ಲಿ ಕೆಲವೊಂದು ನಿರ್ಬಂಧನೆ ಹೇರಲಾಗಿದ್ದು, ಕಂಟೈನ್‌ಮೆಂಟ್ ಹೊರ ವಲಯದಲ್ಲಿ ಕೆಲವೊಂದು ಚಟುವಟಿಕೆಗಳ ನಿರ್ಬಂಧ ಸಡಿಲಗೊಳಿಸಲಾಗಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗಸ್ಟ್ 31 ರವರೆಗೂ ಇರುತ್ತದೆ.

ವೈದ್ಯಕೀಯ ತುರ್ತು ಸೇವೆ ಮತ್ತು ಅಗತ್ಯ ವಸ್ತು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಅನುಮತಿನೀಡಲಾಗಿದ್ದು, ಕಂಟೈನ್‌ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನ ನಿಷೇಧಿಸಿದೆ. ಆದೇಶಗಳನ್ನು ಪಾಲಿಸದಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿ. ಜಗದೀಶ್ ಆದೇಶಿಸಿದ್ದಾರೆ.