ಜಿಲ್ಲೆ

ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಎನ್‌ಐಇ ಚಾಂಪಿಯನ್

reportermys

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ವಿಭಾಗ ಮಟ್ಟದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೈಸೂರಿನ ಎನ್‌ಐಇ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.


ಎನ್‌ಐಇ ಕಾಲೇಜು ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಫೈನಲ್ ಪಂದ್ಯದಲ್ಲಿ ಮೈಸೂರಿನ ಮಂಡ್ಯದ ಪಿಇಎಸ್‌ಸಿಇ ಕಾಲೇಜು ವಿರುದ್ಧ 48-39 ಗೋಲುಗಳಿಂದ ಜಯ ಸಾಧಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎನ್‌ಐಇ ಕಾಲೇಜು ತಂಡ 45-21 ಗೋಲುಗಳಿಂದ ಪೊನ್ನಂಪೇಟೆಯ ಸಿಐಟಿ ವಿರುದ್ಧ ಹಾಗೂ ಪಿಇಎಸ್‌ಸಿಇ ಕಾಲೇಜು ತಂಡ 40-28 ಗೋಲುಗಳಿಂದ ಮೈಸೂರಿನ ವಿವಿಸಿಇ ವಿರುದ್ಧ ಗೆಲುವು ದಾಖಲಿಸಿದ್ದವು.