ಜಿಲ್ಲೆ

ನಿಧಿ ಆಪ್ಕೆ ನಿಕಟ್ 28ರಂದು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಕ್ಷೇತ್ರಿಯ ಭವಿಷ್ಯನಿಧಿ ಕಾರ್ಯಾಲಯದ ವತಿಯಿಂದ "ನಿಧಿ ಆಪ್ಕೆ ನಿಕಟ್' ಕಾರ್ಯಕ್ರಮವನ್ನು ಅ. 28ರಂದು ಬೆಳಗ್ಗೆ 9.30ರಿಂದ ಸಂಜೆ 4ರ ವರೆಗೆ ಈ ಕೆಳಕಂಡ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ.

ಹಾವೇರಿಯ ಶಿಗ್ಗಾಂವಿ ಬಳಿಯ ಉತ್ಸವ ರಾಕ್ ಗಾರ್ಡನ್, ಹುಬ್ಬಳ್ಳಿಯ ಗೋಕುಲ ರಸ್ತೆ ಸಂಜೀವಿನಿ ಆಯುರ್ವೇದಿಕ್ ಮತ್ತು ಮೆಡಿಕಲ್ ಕಾಲೇಜು, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಕಮಲ ಮತ್ತು ವೆಂಕಪ್ಪ ಎಂ. ಅಗಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಬೆಳಗಾವಿ ಜಿಲ್ಲೆ ನಿಪ್ಪಾಣಿಯ ರೋಟರಿ ಕ್ಲಬ್ ಹಾಲ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಸಿಬ್ಬಂದಿ ಕ್ವಾರ್ಟಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿವೆ.

ಸಂಬಂಧಿಸಿದ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾರ್ಮಿಕ ಸಂಘಟನೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ರಾಮಕೇಶ ಮೀನಾ ಪ್ರಕಟಣೆಯಲ್ಲಿ ಕೋರಿದ್ದಾರೆ.