ಜಿಲ್ಲೆ

27ರಂದು ನಿಧಿ ಆಪ್ಕೆ ನಿಕಟ್

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕ್ಷೇತ್ರಿಯ ಭವಿಷ್ಯನಿಧಿ ಕಾರ್ಯಾಲಯದ ವತಿಯಿಂದ ಜೂನ್ 27ರಂದು ಬೆಳಗ್ಗೆ 9.30ಕ್ಕೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ.

ಹಾವೇರಿಯ ಶಿಗ್ಗಾಂವಿ ತಾಲೂಕಿನ ಹನುಮರಳ್ಳಿ ಮೋಟಹಳ್ಳಿ ಪ್ರಭಂಜನ ಅಪೇರಲ್ಸ್, ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಗೋಕುಲ ರಸ್ತೆ ಎಂ.ಎಂ. ಜೋಶಿ ನೇತ್ರಾಲಯ, ಗದಗ ಸವೋರ್ದಯ ಕಾಲನಿ ಹಿಂಭಾಗದ ಜೈನ್ ಎಜ್ಯುಕೇಶನ್ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆ.

ಬೆಳಗಾವಿಯ ಬೈಲಹೊಂಗಲ ಮುರಗೋಡು ರಸ್ತೆಯ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಕುಮಟಾದ ಕಿತ್ತೂರ ಚನ್ನಮ್ಮ ಗಾರ್ಡನ್ ಹತ್ತಿರದ ಪುರಭವನ ಟೌನ್ ಮುನ್ಸಿಪಲ್ ಕೌನ್ಸಿಲ್ನಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

ಸಂಬಂಧಿಸಿದ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು, ಕಾರ್ಮಿಕ ಸಂಘಟನೆ ಯವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಪ್ರಕಟಣೆಯಲ್ಲಿ ಕೋರಿದ್ದಾರೆ.