ಜಿಲ್ಲೆ

ಕಾರು ಡಿಕ್ಕಿಟಂಟಂ ಚಾಲಕ ಸಾವು

ನಿಡಗುಂದಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಬೆಳ್ಳುಬ್ಬಿ ದಾಬಾ ಬಳಿ ಭಾನುವಾರ ಬೆಳಗ್ಗೆ ಆಲಮಟ್ಟಿ ಕಡೆಗೆ ಹೊರಟ ಟಂಟಂ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಟಂಟಂ ಚಾಲಕ ಗೊಳಸಂಗಿಯ ಹಣಮಂತ ಶೇಖಪ್ಪ ಗಣಿ(35) ಮೃತಪಟ್ಟು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.