ಜಿಲ್ಲೆ

ನಿಚ್ಚಲಮಕ್ಕಿ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ

ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಗರದಲ್ಲಿ ಮಂಗಳವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು. ನಂತರ ಸಂಜೆ 4.30 ಕ್ಕೆ ವೆಂಕಟೇಶ್ವರ ದೇವರ ಪಲ್ಲಕ್ಕಿ ಅಪಾರ ಭಕ್ತರ ಜಯಘೋಷದೊಂದಿಗೆ ನಗರದಾದ್ಯಂತ ಸಂಚರಿಸಿ, ಮಧ್ಯರಾತ್ರಿ 2 ಗಂಟೆಯ ವೇಳೆಗೆ ಉತ್ಸವ ದೇವಸ್ಥಾನಕ್ಕೆ ತೆರಳಿ ಬಳಿಕ ಪೂಜೆ ಸಲ್ಲಿಸುವ ಮೂಲಕ ಮುಕ್ತಾಯಗೊಂಡಿತು.

ಬಳಿಕ ರಾತ್ರಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಉತ್ಸವದಲ್ಲಿ ಮಹಿಳೆಯರ ಭಜನಾ ಕುಣಿತ, ಚಂಡೆ ಹಾಗೂ ಗೊಂಬೆ ಕುಣಿತ ಎಲ್ಲರನ್ನು ಆಕರ್ಷಿಸಿತು. ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.