ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ- ಷರತ್ತುಗಳು ಅನ್ವಯ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ-ಅಂಕೋಲಾ ನಡುವೆ ಅರ್ಧ ತಿಂಗಳಿಂದ ಬಂದಾಗಿರುವ ವಾಹನ ಸಂಚಾರ ಬುಧವಾರ ರಾತ್ರಿಯಿಂದ ಪುನರಾರಂಭಗೊಂಡಿದೆ. ಹೆದ್ದಾರಿ ವಾಹನ ಸಂಚಾರಕ್ಕೆ ಲಾರಿ, ಬಸ್ ಮಾಲೀಕರಿಂದ ತೀವ್ರ ಒತ್ತಡವಿತ್ತು.

ಷರತ್ತುಗಳು ಅನ್ವಯ
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ,. "ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಸ್ಥಳ ಭೇಟಿ ಮಾಡಿ ಪ್ರಾಥಮಿಕ ವರದಿ ನೀಡಿದ್ದು, ವಾಹನ ಸಂಚಾರಕ್ಕೂ ಪೂರ್ವ ಕೆಲವು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದರು. ಅವರ ವರದಿಯಲ್ಲಿರುವ ಕಾಮಗಾರಿಗಳನ್ನು ಕೈಗೊಂಡು ವರದಿ ನೀಡುವಂತೆ ರಾಷ್ಟ್ರೀಯ ‌ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ಯೋಜನಾ ನಿರ್ದೇಶಕರಿಗೆ ಆದೇಶ ನೀಡಿದ್ದೆ. ಅವರು ಕ್ರಮ ವಹಿಸಿ ವರದಿ ನೀಡಿದ್ದು ಅದರಂತೆ ಕ್ರಮ ವಹಿಸಲು ಎಸ್ ಪಿ ಅವರಿಗೆ‌ ಸೂಚಿಸಲಾಗಿದೆ ಎಂದರು.

ಕ್ರಮಗಳು:

  • ಗುಡ್ಡದಿಂದ ನೀರು ಹರಿಯಲು ಪ್ರತ್ಯೇಕ ಕಾಲುವೆ ಮಾಡಿಕೊಡಬೇಕು.
    *ಅಪಾಯಕಾರಿ ಸ್ಥಳಗಳಲ್ಲಿ ಗುಡ್ಡ ಕುಸಿತ‌ ಲಕ್ಷಣಗಳನ್ನು ಗುರುತಿಸಲು ಸಿಬ್ಬಂದಿ ನಿಯೋಜಿಸಬೇಕು
  • ಅಧಿಕ ಭಾರದ ವಾಹನಗಳು ಗಂಟೆಗೆ ಗರಿಷ್ಠ 20 ಕಿಮೀ ವೇಗದಲ್ಲಿ ಚಲಿಸುವಂತೆ ಪ್ರತಿಬಂಧಕಾತ್ಮಕ ಸೂಚನಾ ಫಲಕ ಆಳವಡಿಸಬೇಕು.
  • ಹೆದ್ದಾರಿಯಲ್ಲಿ ಭೂಕುಸಿತ ಪ್ರದೇಶ ಮತ್ತು ನಿಧಾನಗತಿ ಸೂಚನಾ ಫಲಕ ಅಳವಡಿಸಬೇಕು.
  • ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಗಂಗಾವಳಿ ನದಿ ಬದಿಯಲ್ಲಿ ಬೂಮ್ ತಡೆಗೋಡೆ ಅಳವಡಿಸುವುದು.
  • ಹೆದ್ದಾರಿಯ ಎರಡು ಬದಿಯ ಮಾರ್ಗಗಳಲ್ಲಿ ಹಳದಿ ಸಿಗ್ನಲ್ ಲೈಟ್ ನ್ನು ಅಳವಡಿಸುವುದು.
  • ಗುಡ್ಡಕುಸಿತ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಕಲ್ಲಿಸುವುದು.
  • ವಾಹನ ಸಂಚಾರ ದಟ್ಟನೆಯನ್ನು ನಿಯಂತ್ರಿಸಲು ವಾಹನಗಳ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು
  • ರಸ್ತೆಯ ಎರಡೂ ಬದಿಯಲ್ಲಿ ಅನಾವಶ್ಯಕವಗಿ ರಸ್ತೆಯ ಮೇಲೆ ವಾಹನ ನಿಲುಗಡೆಯನ್ನು ಪ್ರತಿಬಂಧಿಸುವ ಬಗ್ಗೆ ಸೂಚನಾ ಫಲಕ, ಬ್ಯಾರಿಕೇಟ್ ಗಳನ್ನು ಅಳವಡಿಸಬೇಕು.