ಪೊನ್ನಂಪೇಟೆ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ವಿಜಯವಾಣಿ ಪತ್ರಿಕೆ ಓದುಗರಿಗೆ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ’ ಪೊನ್ನಂಪೇಟೆ ತಾಲೂಕಿನ ಐವರು ವಿಜೇತರನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು. ಉಳುವಂಗಡ ಕಾವೇರಿ ಉದಯ, ಸಾಹಿತಿ ವತ್ಸಲಾ ಶ್ರೀಶ, ಕಂಗಂಡ ಶಶಿ ಮಂದಣ್ಣ, ಅಪ್ಪಚಂಗಡ ಲಲಿತಾ ಮೋಟಯ್ಯ, ವಿದ್ಯಾ ನಾರಾಯಣ ಇದ್ದರು. 
ಜಿಲ್ಲೆ

ಪತ್ರಿಕೆಗಳು ಓದುಗರ ಜ್ಞಾನ ಹೆಚ್ಚುಸುವ ಮಾಧ್ಯಮ

ಮಾದೇಶ್ ತಿ.ನರಸೀಪುರ

ಗೋಣಿಕೊಪ್ಪ: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಓದುಗರಿಗೆ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ’ಯ ಪೊನ್ನಂಪೇಟೆ ತಾಲೂಕಿನ ಐವರು ವಿಜೇತರನ್ನು ಪೊನ್ನಂಪೇಟೆ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು.

ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಮುಖ್ಯ ಅತಿಥಿಯಾಗಿ ಸ್ಯಾರಿ ವಿಜೇತ ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಾಹಿತಿ ವತ್ಸಲಾ ಶ್ರೀಶ, ಕಂಗಂಡ ಶಶಿ ಮಂದಣ್ಣ, ಅಪ್ಪಚಂಗಡ ಲಲಿತಾ ಮೋಟಯ್ಯ, ವಿದ್ಯಾ ನಾರಾಯಣ ಸಾಥ್ ನೀಡಿದರು.

ಸಾಹಿತಿ ವತ್ಸಲಾ ಶ್ರೀಶ ಮಾತನಾಡಿ, ವಿಜಯವಾಣಿ ಪತ್ರಿಕೆ ಓದುಗರ ನಂ.1 ಪತ್ರಿಕೆಯಾಗಿ ಮನೆಮಾತಾಗಿದೆ. ತಾಜಾ ಸುದ್ದಿಗಳೊಂದಿಗೆ ಅತ್ಯುತ್ತಮ ಲೇಖನಗಳು ಓದುಗರ ಜ್ಞಾನದಾಹ ತಣಿಸುತ್ತಿವೆ. ವಿಶೇಷ ಲೇಖನಗಳು ಸೇರಿದಂತೆ ಸ್ಥಳೀಯ ಸುದ್ದಿಗಳು ಓದುಗರನ್ನು ಆಕರ್ಷಿಸುತ್ತವೆ. ಮಹಿಳಾ ಓದುಗರನ್ನು ಪ್ರೋತ್ಸಾಹಿಸಲು ನಾರಿಗೊಂದು ಸ್ಯಾರಿ ಕಾರ್ಯಕ್ರಮ ಉತ್ತಮವಾಗಿದೆ ಎಂದು ತಿಳಿಸಿದರು.

ಸೀರೆ ಭಾರತೀಯ ಸಂಸ್ಕೃತಿಯ ಸಂಕೇತ. ಸೀರೆ ಹೆಣ್ಣಿನ ಸೌಂದರ್ಯದ ಗಣಿ. ಸೀರೆಯನ್ನು ನಾರಿಯರು ವಿವಿಧ ಶೈಲಿಗಳಲ್ಲಿ ಉಡುತ್ತಾರೆ. ಪ್ರತಿ ಹೆಣ್ಣಿಗೂ ಸೀರೆಯ ಮೇಲೆ ವಿಶೇಷ ಒಲವಿರುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಹೆಣ್ಣು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಇದರಿಂದ ಪತ್ರಿಕೆ ಓದಿನತ್ತ ಅವರು ಆಸಕ್ತರಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಲಕ್ಕಿ ಡಿಪ್ ಮೂಲಕ ತಾಲೂಕಿನ 5 ವಿಜೇತರನ್ನು ಆಯ್ಕೆ ಮಾಡಲಾಯಿತು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.

  • ಪೊನ್ನಂಪೇಟೆ ತಾಲೂಕಿನ ವಿಜೇತರು
  • ಪಾರ್ವತಿ ರಮೇಶ್, ಟಿ.ಶೆಟ್ಟಿಗೇರಿ
  • ಕಮಲಾಕ್ಷಿ ಬೆಳ್ಳಿಯಪ್ಪ, ಹುದಿಕೇರಿ
  • ವಿಷ್ಮಾ ನಂದನ್, ಕಾನೂರು
  • ಪಿ.ಪಿ.ಗಂಗಾಮಣಿ, ಗೋಣಿಕೊಪ್ಪ
  • ಟಿ.ಎಚ್.ಅಪ್ಸತ್, ಕಾನೂರು