ಮೂಡಲಗಿ ಪಟ್ಟಣದಲ್ಲಿ ಬುಧವಾರ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಬಾಲಶೇಖರ ಬಂದಿ, ಉಮೇಶ ಬೆಳಕೂಡ, ಸಂಜಯ ಮೋಕಾಶಿ, ಮಲ್ಲು ಬೋಳನ್ನವರ, ಕಷ್ಣಾ ಗಿರೆಣ್ಣವರ, ಲಿಂಗಪ್ಪ ಗಾಡವಿ ಇತರರಿದ್ದರು. 
ಜಿಲ್ಲೆ

ಪತ್ರಿಕೆ ವಿತರಕರ ಸೇವೆ ಅನನ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ದಿನಪತ್ರಿಕೆಗಳನ್ನು ಓದುಗರ ಕೈಗೆ ತಲುಪಿಸುವಲ್ಲಿ ಪತ್ರಿಕೆ ವಿತರಕರ ಪಾತ್ರ ಮುಖ್ಯ ಎಂದು ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕಾ ವಿತರಕರು ಬಿಸಿಲು, ಮಳೆ, ಚಳಿಯನ್ನದೆ ಪ್ರತಿದಿನ ಓದುಗರಿಗೆ ದಿನಪತ್ರಿಕೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತಾರೆ. ಸರ್ಕಾರವು ಪತ್ರಿಕಾ ವಿತರಕರನ್ನು ಕಾರ್ಮಿಕರೆಂದು ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದರು.

ಹಿರಿಯ ಪತ್ರಕರ್ತ ಉಮೇಶ ಬೆಳಕೂಡ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿದರು. ಪತ್ರಿಕಾ ವಿತರಕರಿಗೆ ಸಿಹಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಕಷ್ಣಾ ಗಿರೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನ್ನವರ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಲಿಂಗಪ್ಪ ಗಾಡವಿ, ಶಿವಾನಂದ ಗಾಡವಿ, ಅಲ್ತ್ಾ ಹವಾಲ್ದಾರ, ಸುಭಾಷ ಕಡಾಡಿ, ಶಿವಬಸು ಗಾಡವಿ, ಈಶ್ವರ ಢವಳೇಶ್ವರ, ಸುನಿಲ ಗಸ್ತಿ, ಚಂದ್ರಶೇಖರ ಪತ್ತಾರ ಇತರರಿದ್ದರು.