ಮುದಗಲ್: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ ಹೇಳಿದರು.
ಕನ್ನಾಪುರಹಟ್ಟಿ ಗ್ರಾಮದಲ್ಲಿ ಬುಧವಾರ ಅಮೋಘಸಿದ್ಧೇಶ್ವರ ಹಾಗೂ ಪರಮಾನಂದ ಜಾತ್ರೋತ್ಸವ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹದ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ಪರಸ್ಪರ ಅರಿತುಕೊಂಡು ಸಂಸಾರ ನಡೆಸಬೇಕು ಎಂದರು.
ಪುರಸಭೆ ಸದಸ್ಯ ಎಸ್.ಆರ್.ರಸೂಲ್ ಮಾತನಾಡಿ, ಕನ್ನಾಪುರಹಟ್ಟಿ ಗ್ರಾಮದ ಪರಮಾನಂದ-ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ 14 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರೇ ಹಣ ಕೂಡಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಚಿದಾನಂದಸ್ವಾಮಿ ಗುರುವಿನ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹುಸೇನ್, ಶಿವಕುಮಾರ ಕನ್ನಾಪುರಹಟ್ಟಿ, ಮಲ್ಲಪ್ಪ ಕನ್ನಾಪುರಹಟ್ಟಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮೇಲ್ವಿಚಾರಕಿ ಹೇಮಲತಾ, ತಮ್ಮಣ್ಣ ಗುತ್ತೇದಾರ, ಅಜ್ಮೀರ್ ಬೆಳ್ಳಿಕಟ್, ಪರಮಣ್ಣ ಕನ್ನಾಪೂರಹಟ್ಟಿ, ಖದೀರ್ ಮುದಗಲ್ ಇತರರಿದ್ದರು.