ವಿಜಯನಗರ; ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಬಳಿ ಲಾರಿಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ಹರಿದ ಪರಿಣಾಮ ನವ ವಿವಾಹಿತ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಕೊಟ್ಟೂರಿನ ಪಿಂಜಾರ ಖಾಸಿಂ ಸಾಬ್ (32) ಎಂದು ಗುರುತಿಸಲಾಗಿದೆ. ಮೃತನು ಹೊಸಪೇಟೆಯಲ್ಲಿ ಕಳೆದ ವಾರವಷ್ಟೇ ವಿವಾಹವಾಗಿದ್ದು, ಹೊಸಪೇಟೆಯಿಂದ ತನ್ನ ಸ್ವ ಗ್ರಾಮ ಕೊಟ್ಟೂರಿಗೆ ಬೈಕ್‌ನಲ್ಲಿ ಹೊರಟಿದ್ದ. ಬೈಕ್ ಮತ್ತು ಲಾರಿಗಳು ರಾ.ಹೆ. 50 ರಲ್ಲಿ ಸಾಗುವಾಗ ಲಾರಿಯು ಹಿಂದಿನಿಂದ ಬೈಕ್‌ಗೆ ತಾಗಿದ್ದು, ಬೈಕ್ ಸವಾರ ಆಯತಪ್ಪಿ ಲಾರಿಯ ಹಿಂದಿನ ಗಾಲಿಗೆ ಸಿಲುಕಿದ್ದಾನೆ ಎನ್ನಲಾಗಿದೆ.
ಲಾರಿ ಬೈಕ್ ಸವಾರನ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಪಿಂಜಾರ ಖಾಸಿಂ ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.