ಬ್ಯಾಡಗಿ: ನವಜಾತ ಶಿಶುವನ್ನು ಅನಧಿಕೃತವಾಗಿ ಸಾಕುತ್ತಿದ್ದ ದಂಪತಿ ವಿರುದ್ಧ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅರಬಗೊಂಡ ಗ್ರಾಮದ ಗಿರಿಜವ್ವ ರಾಮಪ್ಪ ಚಳಗೇರಿ ಹಾಗೂ ರಾಮಪ್ಪ ಚಳಗೇರಿ ಎಂಬ ದಂಪತಿ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಜಿಲ್ಲಾ ಮಕ್ಕಳ ರಣಾ ಟಕದ ಸಾಮಾಜಿಕ ಕಾರ್ಯಕರ್ತೆ ಗೌರಮ್ಮ ಶಿವಯೋಗಪ್ಪ ರಾಣೆಬೆನ್ನೂರ ಎಂಬುವರು ದೂರು ನೀಡಿದ್ದಾರೆ. ಆರೋಪಿತರು ತಮ್ಮ ಮನೆಯಲ್ಲಿ 6 ದಿನದಿಂದ ನವಜಾತ ಗಂಡು ಶಿಶು ತಂದು ಸಾಕುತ್ತಿದ್ದಾರೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಗು ಇರುವುದು ಪತ್ತೆಯಾಗಿದೆ. ಆದರೆ, ದಂಪತಿ ಮಗುವಿನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಸದ್ಯ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಸ್ಪಂದನಾ ದತ್ತು ಕೇಂದ್ರದಲ್ಲಿ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.