ಜಿಲ್ಲೆ

ಹೊಲದಲ್ಲಿ ಸಿಕ್ತು ನವಜಾತ ಶಿಶು; ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು

ಬಾಗಲಕೋಟೆ: ಇಂಗಳಗಿ ಗ್ರಾಮದ ಹೊಲದ ಬದುವಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ.

ಗ್ರಾಮದ ಈರಣ್ಣ ಜಮಖಂಡಿ ಎಂಬುವರಿಗೆ ಈ ಶಿಶು ಕಾಣಿಸಿದೆ. ಮಗು ಜನಿಸಿ ಐದಾರು ದಿನಗಳು ಆಗಿರಬಹುದು ಎನ್ನಲಾಗಿದೆ.

ಸ್ಥಳೀಯರೆಲ್ಲ ಸೇರಿ ಮಗುವನ್ನು ರಕ್ಷಿಸಿ, ಮುಧೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)