ಹುಬ್ಬಳ್ಳಿ: ನವಜಾತ ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಎಸೆದು ಹೋಗಿರುವ ಘಟನೆ ಇಲ್ಲಿಯ ಯಲ್ಲಾಪುರ ಓಣಿಯ ಪಾಟೀಲ ಗಲ್ಲಿಯಲ್ಲಿ ನಡೆದಿದೆ.
ಅದಾಗ ತಾನೇ ಜನಿಸಿದ ಗಂಡು ಶಿಶುವನ್ನು ತಿಪ್ಪೆಯಲ್ಲಿ ಎಸೆದಿದ್ದು, ಪೌರ ಕಾರ್ಮಿಕರು ಕಸಗುಡಿಸುವ ವೇಳೆ ಪತ್ತೆಯಾಗಿದೆ. ಪಾಪಿಗಳ ಕ್ರೌರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಡಿಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.