ಬೆಂಗಳೂರು: ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಮತ್ತು ಟಿಎಎಂ ಪ್ರೊಡಕ್ಷನ್ ಸಹಯೋಗದೊಂದಿಗೆ ಮಂಗಳವಾರ (ಡಿ.31) ‘ಕೌಂಟ್ ಡೌನ್- 2020’ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ಸ್ ಸಾಕ್ಷಿಯಾಗಲಿದೆ.
ಆಕ್ಷನ್- ಕಟ್ ಪ್ರೊಡಕ್ಷನ್ಸ್, ಎಲ್ಇಡಿ ವಿಷನ್, 3ಎಸ್ ಇವೆಂಟ್ಸ್, ವಿ ಡಾಟ್ 9 ಇವೆಂಟ್ಸ್, ಬುಕ್ವೆುೖ ಶೋ, ಇಂವೆಟ್ಸ್ ಹೈ, ಮೇರಾ ಇವೆಂಟ್ಸ್, ಟೌನ್ಸ್ಕ್ರಿಪ್ಟ್, ಹೈಪ್, ಗೋಇವೆಂಟ್ಸ್ ಕಂಪನಿಗಳು ಕಾರ್ಯಕ್ರಮದ ಪ್ರ್ರಾಯೋಜಕತ್ವವನ್ನು ವಹಿಸಲಿವೆ.
ನಾನ್ಸ್ಟಾಪ್ ಖುಷಿ: ರಾತ್ರಿ 8.30ರಿಂದ ಮಧ್ಯರಾತ್ರಿ 12ರವರೆಗೆ ತಡೆರಹಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಮುಖವಾಗಿ ಡಿಜೆ ಮ್ಯೂಸಿಕ್, ನೃತ್ಯ, ಫೈರ್ ವರ್ಕ್ಸ್, ಸಂಗೀತ, ಅನಿಯಮಿತ ಆಹಾರ, ಐಎಂಎಫ್ಎಲ್ ಪಾನೀಯ, ಮಕ್ಕಳ ಮನರಂಜನೆಗಾಗಿ ವಿಶೇಷ ಝೋನ್ ಇರಲಿದೆ. ಗಾಯಕ ನವೀನ್ ಸಜ್ಜು, ಸಂಚಿತ್ ಹಗಡೆ ಸಭಿಕರನ್ನು ರಂಜಿಸಲಿದ್ದಾರೆ ಎಂದು ಆಯೋಜಕ ವರುಣ್ ತಿಳಿಸಿದ್ದಾರೆ.
ಪ್ರವೇಶ ಶುಲ್ಕ ನಿಗದಿ
ಜೋಡಿಗಳಿಗೆ 3,499 ರೂ., ಕುಟಂಬಕ್ಕೆ 4,299 ರೂ., ಒಬ್ಬ ಮಹಿಳೆಗೆ 1,999 ರೂ., ಪುರುಷನಿಗೆ 2,999 ರೂ., 6ರಿಂದ 16 ವರ್ಷದೊಳಗಿನ ಮಕ್ಕಳಿಗೆ 999 ರೂ. ಪ್ರವೇಶ ಶುಲ್ಕವಿರಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 88841 99988, 88843 88801, 96060 60662 ಸಂರ್ಪಸಬಹುದು.