ಜಿಲ್ಲೆ

ಶ್ರೀರಂಗನಾಥಸ್ವಾಮಿಗೆ ವಿಶೇಷ ಅಲಂಕಾರ

ರೇಷ್ಮೆ ನಗರ ಡೆಸ್ಕ್

ಮಾಗಡಿ : ನೂತನ ವರ್ಷದ ಪ್ರಯುಕ್ತ ತಾಲೂಕಿನ ವಿವಿದ ದೇವಾಲಯಗಳಲ್ಲಿ ಬುಧವಾರ ಮುಂಜಾನೆಯಿಂದಲ್ಲೆ ಭಕ್ತರ ದಂಡು ಹರಿದುಬಂದಿತ್ತು.

ಪಟ್ಟಣದ ತಿರುಮಲೆ ಮಾಂಡ್ಯವ್ಯ ಕ್ಷೇತ್ರ ತಿರುಮಲೆ ಶ್ರೀರಂಗನಾಥಸ್ವಾಮಿ ದೇವರಿಗೆ ವಜ್ರಖಚಿತ ಬಂಗಾರದ ಕೀರೀಟ ಧರಿಸಿ ವಿಶೇಷ ಅಲಂಕಾರ ಮಾಡಲಾಯಿತು. ಅರ್ಚಕ ವೃಂದ ಮುಜಾಂನೆಯಿಂದಲ್ಲೆ ದೇವರಿಗೆ ಪಂಚಾಂಮೃತ ಅಭಿಷೇಕ, ಅರ್ಚನೆ, ವಿಷ್ಣುಪಾರಾಯಣ ಸೇರಿ ಧಾರ್ಮಿಕ ಕೈಂಕರ್ಯ ನಡೆಸಿದರು.

ದೇವರ ದರ್ಶನಕ್ಕಾಗಿ ಸುಮಾರು ಅರ್ಧ ಕಿಲೋಮೀಟರ್ ದೂರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ನೂತನ ವರ್ಷ ಆರಂಭದ ಪ್ರಯುಕ್ತ ಕಿ,ಮೀ ದೂರದಷ್ಟು ವಾಹನಗಳು ನಿಂತಿದವು. ಈಬಾರಿ ವಿಶೇಷವಾಗಿ ಭಕ್ತರ ಅರಕೆ ತಿರಿಸಲು ಹುಂಡಿಗಳನ್ನು ಅಳವಡಿಸಲಾಗಿತ್ತು. ದೇವರ ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಏರ್ಪಡಿಸಲಾಯಿತು.

ಪಟ್ಟಣದ ಸೋಮೇಶ್ವರ, ಕಲ್ಯಾಗೇಟ್ ವಿನಾಯಕ, ಹೊಸಪೇಟೆ ಶನೇಶ್ವರ ದೇವಾಲಯ, ಸಾವನದುರ್ಗ ಲಕ್ಷ್ಮಿನರಸಿಂಹಸ್ವಾಮಿ, ಸಾವಂದಿ ವೀರಭದ್ರ ಸ್ವಾಮಿ, ಸುಗ್ಗನಹಳ್ಳಿ ಶ್ರೀಪತಿಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಕಲ್ಲೂರು ಆಂಜನೇಯಸ್ವಾಮಿ ಸೇರಿ ಪ್ರಸಿದ್ಧ ದೇವಾಲಯಗಳಲ್ಲಿ ನೂತನ ವರ್ಷದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಏರ್ಪಡಿಸಲಾಯಿತು.

ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಒಂದು ದಿನದ ಪ್ರವಾಸವೆಂದು ದೇವಾಲಯಗಳಿಗೆ ಭೇಟಿ ನೀಡಿ ದರ್ಶನಪಡೆದದ್ದು ವಿಶೇಷವಾಗಿತ್ತು. ನೂತನ ವರ್ಷ ಆರಂಭದ ಅಂಗವಾಗಿ ಹಿರಿಯರು, ಕಿರಿಯರು ಎಂಬ ಬೇಧ, ಭಾವವಿಲ್ಲದೆ ಸಿಹಿ ಹಂಚಿ ನೂತನ ವರ್ಷವನ್ನು ಸ್ವಾಗತಿಸಿ ಶುಭಾಷಯಗಳನ್ನು ವಿನಿಮಯಮಾಡಿ ಕೊಂಡರು.

ಹೆಣ್ಣು ಮಕ್ಕಳು ಮನೆಯ ಮುಂದೆ, ಯುವಕರು ರಸ್ತೆಗಳಲ್ಲಿ ಚಿತ್ತಾರದ ರಂಗೋಲೆ ಬಿಡಿಸಿ ನೂತನ ವರ್ಷಾರಂಭದ ದಿನಾಂಕ ಮತ್ತು ಶುಭಾಷಯ ಬರೆದು ಪುಷ್ಪ ಸಿಂಚನ ಮಾಡಿ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸಿಹಿ, ಖ್ಯಾತ ಹಾಗೂ ಮಾಂಸಹಾರಿಗಳು ಬರ್ಜರಿ ಬೋಜನ ಏರ್ಪಡಿಸಿಸವಿದರು.