ಮೇಲುಕೋಟೆ: ಆಷಾಢ ಮಾಸದ ಪ್ರಯುಕ್ತ ಇಲ್ಲಿನ ಹೊಸಬಾವಿ ಕಾಳಿಕಾ ದೇವಿಯ ಜಯಂತ್ಯುತ್ಸವ ವೈಭವದಿಂದ ಜರುಗಿತು.
ಪ್ರತಿವರ್ಷದಂತೆ ಈ ಬಾರಿಯೂ ಪಂಚಕಲ್ಯಾಣಿಯಲ್ಲಿ ಪೂಜಾ ವಿಧಿ-ವಿಧಾನ ನೆರವೇರಿತು. ಪಂಚನಾದಸ್ವರ ಡೋಳ್ಳುಕುಣಿತದೊಂದಿಗೆ ದೇವಿಯ ಕರಗವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ದೇವಿದ ದರ್ಶನ ಪಡೆದರು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಸಂಜೆ ವರೆಗೂ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಕಾಲ ಕಾಲಕ್ಕೆ ಮಳೆಬೆಳೆಯಾಗಿ ಗ್ರಾಮದಲ್ಲಿ ಶಾಂತಿನೆಮ್ಮದಿ ನೆಲಸಲಿ ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ದೇವರ ಗುಡ್ಡಪ್ಪ ಬೈರಶೆಟ್ಟಿ ಸಹಾಯಕ ಗುಡ್ಡಪ್ಪ ಶ್ರೀ ಕಾಂತ್ ನೇತೃತ್ವದಲ್ಲಿ ಹೋಮ-ಹವನ ನೆರವೇರಿಸಲಾಯಿತು. ನೂರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು.