ಜಿಲ್ಲೆ

ಸಚಿವರನ್ನು ಕರೆದೊಯ್ಯಲು ಹೊಸ ತೆರೆದ ವಾಹನ

Uttara Kannada - Subash Hegde

ಕಾರವಾರ: ಪೊಲೀಸ್ ತುಕಡಿಗಳ ವೀಕ್ಷಣೆಗೆ ಸಚಿವರನ್ನು ಕರೆದೊಯ್ಯಲು ಹೊಸ ವಾಹನ ಬಂದಿದೆ.‌

ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜನೆಯಾಗುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮುಂತಾದ ಅಧಿಕೃತ ಲಾರ್ಯಕ್ರಮಗಳಲ್ಲಿ, ಪೊಲೀಸ್ ಶಾಲೆಯ ನಿರ್ಗಮನ ಪಥಸಂಚಲನದಲ್ಲಿ ಅತಿಥಿಗಳನ್ನು ಕರೆದೊಯ್ಯಲು ತೆರೆದ ಜೀಪ್ ಬಳಸಲಾಗುತ್ತದೆ.

ಅದರ ಮೇಲೆ ನಿಂತು ಉಸ್ತುವಾರಿ ಸಚಿವ ಅಥವಾ ಗಣ್ಯ ವ್ಯಕ್ತಿ ತುಕಡಿಗಳನ್ನು ವೀಕ್ಷಣೆ ಮಾಡುವುದು ವಾಡಿಕೆ. ಅವರ ಹಿಂದೆ ಪರೇಡ್ ಕಮಾಂಡರ್ ಖಡ್ಗ ಹಿಡಿದು ನಿಂತಿರುತ್ತಾರೆ. ಬಣ್ಣದ ಟೋಪಿ ತೊಟ್ಟ ಚಾಲಕ ವಾಹನವನ್ನು ಅತಿ ನಿಧಾನವಾಗಿ ಓಡಿಸುತ್ತಾನೆ. ಕಳೆದ‌ ಹಲವು ದಶಕಗಳಿಂದ ಮಹೇಂದ್ರ ಜಿಪ್ಸಿ ವಾಹನವನ್ನು ಈ ಕಾರ್ಯಕ್ಕೆ ಕಾರವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಬಳಸಲಾಗುತ್ತಿತ್ತು. ಅದು ಹಳೆಯದಾಗಿದ್ದು, ಹೊಸ ವಾಹನ ತರಲಾಗಿದೆ.

ಗುರುವಾರ ಜಿಲ್ಲಾಡಳಿತದಿಂದ ಕಾರವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜನೆಯಾಗಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹೊಚ್ಚ ಹೊಸ ಥಾರ್ ಜೀಪ್ ಸಚಿವರನ್ನು ಕರೆದೊಯ್ಯಲಿದೆ.