ಜಿಲ್ಲೆ

6 ತಿಂಗಳೊಳಗೆ 1700 ಗ್ರಾಮ ಕರಣಿಕರ ನೇಮಕ

Mangaluru - Prakash MC Manjeshwar

ಮಂಗಳೂರು: ಕಂದಾಯ ಇಲಾಖೆಯ ಕೆಲಸಗಳಿಗೆ ವೇಗ ನೀಡುವ ಉದ್ದೇಶದಿಂದ ಮುಂದಿನ ಆರು ತಿಂಗಳೊಳಗೆ ರಾಜ್ಯದಲ್ಲಿ 1500 ರಿಂದ 1700 ರಷ್ಟು ಗ್ರಾಮ ಕರಣಿಕರನ್ನು ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಗರದ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಾಯಂಕಾಲ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗ್ರಾಮ ಕರಣಿಕರ ನೇಮಕ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ಜಿಲ್ಲಾಧಿಕಾರಿಗಳಿಗೆ ಈ ಅಧಿಕಾರ ನೀಡಿ ನೇಮಕಾತಿ ಮಾಡಲಾಗುವುದು ಎಂದರು.
ಮುಂದಿನ 3- 4 ತಿಂಗಳೊಳಗೆ ರಾಜ್ಯದಲ್ಲಿ 250ರಷ್ಟು ಲೈಸನ್ಸ್ಡ್ ಸರ್ವೇಯರ್ ಗಳ ನೇಮಕಾತಿ ಕೂಡ ನಡೆಯಲಿದೆ ಎಂದು ಅವರು ತಿಳಿಸಿದರು.