ಜಿಲ್ಲೆ

ಆಧುನಿಕ ತಾಂತ್ರಿಕತೆ ಬಳಕೆ ಲಾಭದಾಯಕ: ಜಿಲ್ಲಾಧಿಕಾರಿ ನಾಗರಾಜ್ ಅಭಿಪ್ರಾಯ

Kolar

ಚಿಕ್ಕಬಳ್ಳಾಪುರ: ಸರಳೀಕರಣದ ಆಧುನಿಕ ತಾಂತ್ರಿಕತೆಯ ಬಳಕೆಯು ಲಾಭದಾಯಕ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೈಗೊಂಡಿದ್ದ ಜಿಲ್ಲಾ ಮಟ್ಟದ ಉತ್ತಮ ಆಡಳಿತ ಕಾರ್ಯಾಗಾರದಲ್ಲಿ ವಾತನಾಡಿ, ಡಿಜಿಟಲ್ ರೂಪದಲ್ಲಿ ಸರ್ಕಾರದ ಸೇವೆಗಳನ್ನು ಅಗತ್ಯವಿರುವ ಕಡೆ ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಾವಾಣಿಕವಾಗಿ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.


ಅಂತರ್ಜಾಲದಲ್ಲಿ ಮಹತ್ತರವಾದ ಬೆಳವಣಿಗೆಗಳು, ವಾರುಕಟ್ಟೆಗೆ ಬಂದ ಆಧುನಿಕ ಉಪಕರಣಗಳ ಮೂಲಕ ಆನ್ ಲೈನ್‌ನಲ್ಲಿಯೇ ಜನರಿಗೆ ನಿರ್ದಿಷ್ಟ ಸೇವೆ ಒದಗಿಸಲು ಸಾಧ್ಯವಾಗಿದೆ. ಇಂದು ನಗರ, ಪಟ್ಟಣ ಪ್ರದೇಶಗಳ ವಾದರಿಯಲ್ಲಿ ಹಳ್ಳಿಗಳಲ್ಲೂ ಡಿಜಿಟಲ್ ಬೆಳವಣಿಗೆ ಕಂಡು ಬರುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಆಡಳಿತ ವ್ಯವಸ್ಥೆಯ ವಿಕೇಂದ್ರಿಕರಣಕ್ಕೆ ಸಹಕಾರಿಯಾಗಿದೆ ಎಂದರು.


ಕಾಲದಿಂದ ಕಾಲಕ್ಕೆ ಡಿಜಿಟಲ್ ವ್ಯವಸ್ಥೆಯು ಮಹತ್ತರವಾದ ಹೊಸ ಸಂಶೋಧನೆಗಳಿಂದ ಕ್ಷಿಪ್ರಗತಿಯ ವೇಗದಲ್ಲಿ ಸಾಗುತ್ತಿದೆ. ಇದಕ್ಕೆ ಅನುಗುಣವಾಗಿ ವಾನವ ಸಂಪನ್ಮೂಲ ಹೊಂದಾಣಿಕೆಯಾಗಬೇಕು. ಸಮರ್ಪಕ ಅನುಷ್ಠಾನಕ್ಕೆ ನಿರಂತರ ಅಧ್ಯಯನ, ಜ್ಞಾನಾರ್ಜನೆ ಅಗತ್ಯವಿದೆ. ಜಿಲ್ಲೆಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಮತ್ತಷ್ಟು ಉತ್ಕ್ಪ್ರಷ್ಟಗೊಳಿಸಲು, ಇದರ ವ್ಯಾಪ್ತಿಗೆ ಬಾಕಿ ಇರುವ ಸರ್ಕಾರಿ ಸೇವೆಗಳನ್ನು ಸೇರಿಸಿ, ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.


ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ರವಿ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಅಧಿಕಾರಿ ಕೃಷ್ಣಪ್ಪ, ಎಜೆಎಸ್‌ಕೆ ತಂತ್ರಾಂಶದ ಸವಾಲೋಚಕ ಬಿ.ವಿ.ಅಜಯ್, ಭೂಮಿ ತಂತ್ರಾಂಶದ ಸವಾಲೋಚಕ ಮಧು, ಗ್ರಾವ ಒನ್ ತಂತ್ರಾಂಶದ ಸವಾಲೋಚಕ ಪೂರ್ಣಚಂದ್ರ ಮತ್ತಿತರರು ಇದ್ದರು.


ಹಳ್ಳಿಗಳಲ್ಲಿ ಆಡಳಿತ ಸಪ್ತಾಹ


ವಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆಗಾಗಿ ಗ್ರಾಮೀಣ ಭಾಗದಲ್ಲಿ ಹಳ್ಳಿಗಳ ಕಡೆ ಆಡಳಿತ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಡಿ.19ರಂದು ಚಾಲನೆ ನೀಡಿದ್ದು, ಡಿ.25ರವರೆಗೆ ನಡೆಯಲಿದೆ. ಇದೇ ವೇಳೆ ಸರ್ಕಾರದ ಯೋಜನೆಗಳು, ವಿಶೇಷ ಕಾರ್ಯಕ್ರಮಗಳು, ವಿಶಿಷ್ಟ ಸೇವೆಗಳನ್ನು ಡಿಜಿಟಲ್ ಮೂಲಕ ತಲುಪಿಸುತ್ತಿರುವಿಕೆ, ಬಳಕೆಯಲ್ಲಿ ಜನರ ಪ್ರಮುಖ ಪಾತ್ರ ಸೇರಿದಂತೆ ಮಹತ್ವದ ಹಲವು ವಿಚಾರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಾಗರಾಜ್ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ


ಕಾರ್ಯಾಗಾರದಲ್ಲಿ ಉತ್ತಮ ಆಡಳಿತ ಸೇವೆಯ ಉತ್ತೇಜನ ಹಾಗೂ ಮಹತ್ವದ ವಿಚಾರವಾಗಿ ಜಿಲ್ಲಾ ಎನ್‌ಐಸಿ ಕೇಂದ್ರದ ಮುಖ್ಯಸ್ಥ ವಿನಯ್, ಸಕಾಲ ಯೋಜನೆಯಡಿ ಜನರಿಗೆ ಕಾಲ ಮಿತಿಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ, ಜಿಲ್ಲೆಯ ಸಾಧನೆಯ ಬಗ್ಗೆ ಸಕಾಲ ಯೋಜನೆಯ ಸವಾಲೋಚಕ ವಸಂತ್, ಆರ್‌ಟಿಐ ಮತ್ತು ಐಪಿಜಿಆರ್‌ಎಸ್ ತಂತ್ರಾಂಶಗಳು, ಇ-ಆಡಳಿತದ ಪಾರದರ್ಶಕ ಸೇವೆಗಳ ಬಗ್ಗೆ ಜಿಲ್ಲಾ ಆಧಾರ್ ಸವಾಲೋಚಕ ಮಂಜುನಾಥ್ ವಾಹಿತಿ ನೀಡಿದರು.