ಜಿಲ್ಲೆ

ಅವನಿ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಎಸ್.ಎನ್.ರವೀಂದ್ರ

ಶೃಂಗೇರಿ: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಅವನಿ ಶ್ರೀ ಶೃಂಗೇರಿ ಶಾಖಾಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಅದ್ವೈತ್ವಾನಂದ ಭಾರತೀ ಸ್ವಾಮಿ ದೀಕ್ಷೆ ಸ್ವೀಕರಿಸಿದರು.

ಶುಕ್ರವಾರ ಶೃಂಗೇರಿ ಶಾರದಾಮಠದ ನರಸಿಂಹವನದಲ್ಲಿ ಕಿರಿಯ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕವಿಧಿ ವಿಧಾನ ಕಾರ್ಯಕ್ರಮದಲ್ಲಿ ನೂತನ ಉತ್ತರಾಧಿಕಾರಿಗೆ ಶ್ರೀ ಅದ್ವೈತಾನಂದ ಭಾರತೀ ಎಂಬ ಯೋಗಪಟ್ಟ ಅನುಗ್ರಹಿಸಿದರು. ಅವನಿ ಶ್ರೀ ಶೃಂಗೇರಿ ಶಾಖಾಮಠದ ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು.