ಬೆಂಗಳೂರು: ಸರ್ಜಾಪುರ ಜಂಕ್ಷನ್ನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಪ್ರಕಾಶ್ ಆರ್ಟ್ಸ್ ಪ್ರೖೆವೇಟ್ ಲಿಮಿಟೆಡ್ ನಿರ್ವಿುಸಿರುವ ಪಾದಚಾರಿ ಮೇಲ್ಸೇತುವೆಯನ್ನು ಬುಧವಾರ ಉದ್ಘಾಟಿಸಲಾಯಿತು.
ಪೌರಕಾರ್ವಿುಕರಿಗೆ ಶುಚಿತ್ವ ಕಿಟ್ (ಹೈಜಿನಿಕ್ ಕಿಟ್) ವಿತರಣೆ ಮಾಡುವ ಮೂಲಕ ಮೇಯರ್ ಗೌತಮ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಉದ್ಘಾಟನೆ ನೆರವೇರಿಸಿದರು. ಉಪಮೇಯರ್ ರಾಮಮೋಹನ ರಾಜು, ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಪಾಲಿಕೆ ಸದಸ್ಯರಾದ ಚಂದ್ರಪ್ಪ, ಜಿ.ಮಂಜುನಾಥ್, ಸರಳಾ, ಮುಖ್ಯ ಇಂಜಿನಿಯರ್ ಸೋಮಶೇಖರ್, ಅಧೀಕ್ಷಕ ಇಂಜಿನಿಯರ್ ಬಸವರಾಜ್ ಕಬಾಡೆ ಮತ್ತಿತರರು ಉಪಸ್ಥಿತರಿದ್ದರು. ಮೇಲ್ಸೇತುವೆಯಲ್ಲಿ ಸಿ.ಸಿ ಕ್ಯಾಮರಾ, ಎರಡೂ ಬದಿ ಲಿಫ್ಟ್, ಪ್ರಖರ ಬೆಳಕಿನ ಎಲ್ಇಡಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಅತಿಯಾದ ವಾಹನ ಸಂಚಾರ ದಿಂದ ರಸ್ತೆ ದಾಟಲು ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರಿಗೆ ಅನುಕೂಲವಾಗಿದೆ.