DR.BASAVARAJA PATIL 
ಜಿಲ್ಲೆ

ಇಂದು ನೂತನ ಪದಾಽಕಾರಿಗಳ ಪದಗ್ರಹಣ *ಮಧುಮೇಹದ ನವೀನ ಬೆಳವಣಿಗೆ ಕುರಿತು ವಿಶೇಷ ಕಾರ್ಯಾಗಾರ

ರಾಯಚೂರು ಆರ್‌ಎಸ್‌ಎಸ್‌ಐಡಿ ಕರ್ನಾಟಕ ಚಾಪರ್ ಅಸೋಸಿಯೇಷನ್‌ನ ನೂತನ ಪದಾಽಕಾರಿಗಳ ಪದಗ್ರಹಣ

ಹಾಗೂ ಮಧುಮೇಹದ ನವೀನ ಬೆಳವಣಿಗೆ ಕುರಿತು ಕಾರ್ಯಾಗಾರವನ್ನು ಏ.೨೬ ರಂದು ನಗರದ ರಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಡಾ.ಬಸವರಾಜ ಎಂ. ಪಾಟಿಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಾಗಾರವನ್ನು ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ.ಎಚ್. ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಭಾರತೀಯ ವೈಧ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್, ವಿಶೇಷ ಆಹ್ವಾನಿತರಾಗಿ ಡಾ.ರಾಮಕೃಷ .ಎಂ.ಆರ್., ರಿಮ್ಸ್ ಮೆಡಿಕಲ್ ಸೂಪರಿಟೆಂಡ್ ಡಾ.ಭಾಸ್ಕರ.ಕೆ, ಡಾ.ಹರಿಪ್ರಸಾದ, ಡಾ.ನೇಹಾ ಸುಖಾಣಿ ಆಗಮಿಸಲಿದ್ದಾರೆ ಎಂದರು.

ಗರ್ಬಿಣಿ ಮಹಿಳೆಯರಲ್ಲಿ ಮಧುಮೇಹ ಕುರಿತು ಡಾ.ಮಂಜುನಾತ್.ಯು, ಟೈಪ್-೧ ಮಧುಮೇಹ ಕುರಿತು ಡಾ.ಸಂಜೀವ ಚೆಟ್ಟಿ, ಟೈಪ್ -೨ ಮಧುಮೇಹದ ಕುರಿತು ಡಾ.ಕಾರ್ತಿಕ ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಮಧುಮೇಹ ರೋಗ ಪ್ರಮಾಣ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಮಧುಮೇಹ ಮಕ್ಕಳು, ಗರ್ಬಿಣಿಯರು, ಯುವಕ ಯುವತಿಕಾಣುತ್ತಿರುವ ಕಳವಳಕಾರಿ. ಜೀವನಶೈಲಿ, ಆಹಾರ ಪದ್ದತಿಗಳು ಕಾರಣವಾಗಿದ್ದು ಜಾಗೃತಿ ಮೂಲಕ ನಿಯಂತ್ರಿಸಬಹುದಾಗಿದೆ ಎಂದರು.

ಹಿರಿಯ ವೈದ್ಯ ಡಾ.ಮಹಾಲಿಂಗಪ್ಪ ಮಾತನಾಡಿ, ರೋಗ ನಿರೋಧಕ ಮಾತ್ರೆಗಳಿಂದ ಮದುಮೇಹ ರೋಗಿ ಆರೋಗ್ಯದ ಮೇಲೆ ಪರಿಣಾಮವಾಗುವದಿಲ್ಲ. ಮಧುಮೇಹದಿಂದ ಜೀವನದ ಮೇಲೆ ಆಗುವ ಪರಿಣಾಮ ಇಂದಿನ ಮುನ್ನಚ್ಚರಿಕೆ ವಹಿಸುವದರಿಂದ ತಡೆಯಲು ಸಾಧ್ಯವಿದೆ. ಮಧುಮೇಹ ನಿಯಂತ್ರಣಕ್ಕೆ ಕೆಆರ್‌ಎಸ್‌ಎಸ್‌ಡಿಐ ಶಾಖೆಯಿಂದ ಅನೇಕ ಕಾರ್ಯಕ್ರಮಗಳ ಮೂಲಕ ತಿಳುವಳಿಕೆ ನೀಡುವ ಕೆಲಸ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಡಾ. ರಾಮಕಷ್ಣ ಎಂ.ಆರ್, ಡಾ.ಹರಿಪ್ರಸಾದ, ಡಾ.ಸಿದ್ದಲಿಂಗಪ್ಪ, ಡಾ.ನಾಗಭೂಷಣ ಇದ್ದರು.