ಬೆಂಗಳೂರು ಸದಾಶಿವ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್​ ಸಮ್ಮುಖದಲ್ಲಿ ಕೆ.ಚಂದ್ರಾರೆಡ್ಡಿ, ಮುನಿರಾಜು ಕಾಂಗ್ರೆಸ್​ ಸೇರ್ಪಡೆಗೊಂಡರು. ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಇದ್ದರು. 
ಜಿಲ್ಲೆ

ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್​ ಪಡೆಗೆ ಹೊಸ ಹುರುಪು

ಕೈ ಹಿಡಿದ ಬಂಗಾರಪೇಟೆ ಕೆ.ಚಂದ್ರಾರೆಡ್ಡಿ, ತಾಲೂಕು ಜೆಡಿಎಸ್​ ಅಧ್ಯಕ್ಷ - ಪ್ರಮುಖ ಮುಖಂಡರು ಮರಳಿ ಗೂಡಿಗೆ

ಬಂಗಾರಪೇಟೆ: ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ, ಕ್ಷೇತ್ರದ ಮುಖಂಡ ಕೆ.ಚಂದ್ರಾರೆಡ್ಡಿ ಮತ್ತು ಬಂಗಾರಪೇಟೆ ತಾಲೂಕು ಜೆಡಿಎಸ್​ ಅಧ್ಯಕ್ಷ ಮುನಿರಾಜು ಸೋಮವಾರ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಈ ಹಿಂದೆ ಕಾಂಗ್ರೆಸ್​ನಲ್ಲೇ ಇದ್ದ ಕೆ.ಚಂದ್ರಾರೆಡ್ಡಿ ಎಂಎಲ್ಸಿ ಟಿಕೆಟ್​ ಸಿಗದೆ ಅಸಮಾಧಾನಗೊಂಡು ಬಿಜೆಪಿಗೆ ಸೇರಿಸಿದ್ದರು. ಈ ವೇಳೆ ಮಾಜಿ ಸಂಸದ ಎಸ್​.ಮುನಿಸ್ವಾಮಿ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಹಾಗೂ ಗೌರವ ಹುದ್ದೆ ನೀಡುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿದ ಕಾರಣ ಎಸ್​.ಎನ್​. ನಾರಾಯಣಸ್ವಾಮಿ ಸಮ್ಮುಖದಲ್ಲಿ ಮರಳಿ ಕಾಂಗ್ರೆಸ್​ ಮನೆ ಸೇರಿದ್ದಾರೆ.

ಬಂಗಾರಪೇಟೆ ಕಸಬಾ ವ್ಯಾಪ್ತಿಯ ಕಾರಮಂಗಲ ಎಂ.ಮುನಿರಾಜು ಅವರು ಜೆಡಿಎಸ್​ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ಗೆ ಪದಾರ್ಪಣೆ ಮಾಡಿದ್ದಾರೆ. ಕಸಬಾ ವ್ಯಾಪ್ತಿಯ

ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದರು. ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಅವರ ಪತ್ನಿಯೂ ಕಾಂಗ್ರೆಸ್​

ಅಭ್ಯರ್ಥಿಯಾಗಿದ್ದರು. ಆದರೆ ಇಬ್ಬರೂ ಪರಾಭವಗೊಂಡಿದ್ದರು.

ನಂತರದಲ್ಲಿ ನಡೆದ ರಾಜಕೀಯ ಬೆಳೆವಣಿಗೆಯಲ್ಲಿ ಮುನಿರಾಜು ಜೆಡಿಎಸ್​ ಸೇರಿದರು. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು.

ಕೆ.ಚಂದ್ರಾರೆಡ್ಡಿ ಮತ್ತು ಮುನಿರಾಜು ಕಾಂಗ್ರೆಸ್​ ಬಂದಿರುವುದು ಸ್ವಾಗತಾರ್ಹ. ಮುಖಂಡರು ಪಕ್ಷದ ಶಿಸ್ತಿಗೆ ಬದ್ಧರಾಗಿ ಸಂಘಟನೆ ಮಾಡಬೇಕು. ಕಾಂಗ್ರೆಸ್​ ಶಿಸ್ತನ್ನು ನಂಬಿ ಯಾರೇ ಬರಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. - ಎಸ್​.ಎನ್​.ನಾರಾಯಣಸ್ವಾಮಿ ಶಾಸಕ ಮತ್ತೆ ಕಾಂಗ್ರೆಸ್​ಗೆ ಬಂದಿರುವುದು ನನ್ನ ಸ್ವಂತ ಮನೆಗೆ ಬಂದಂತಾಗಿದೆ. ಏನೇ ಸಮಸ್ಯೆ ಇದ್ದರೂ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸಕ್ಕೆ ಹೋಗಬಾರದು ಎಂದು ಜ್ಞಾನೋದಯವಾಗಿದೆ. - ಕೆ.ಚಂದ್ರಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ, ಬಂಗಾರಪೇಟೆ