ಜಿಲ್ಲೆ

ಹೊಸ ಆಲೋಚನೆಗಳಿಂದ ಮಹಿಳಾ ಸಬಲೀಕರಣ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನವೋದ್ಯಮಗಳ ಸ್ಥಾಪನೆಯತ್ತ ಮಹಿಳೆಯರು ಆಸಕ್ತಿ ತೋರಬೇಕು. ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟು ಹೊಸ ಆಲೋಚನೆಗಳಿಂದ ಮಹಿಳೆಯರು ಸಬಲೀಕರಣಗೊಳ್ಳಬಹುದು ಎಂದು ಹುಬ್ಬಳ್ಳಿ-ಧಾರವಾಡ ಲಘು ಉದ್ಯೋಗ ಭಾರತಿಯ ಅಧ್ಯಕ್ಷ ಎಸ್.ಸಿ. ಪಾಟೀಲ ಎಂದು ಹೇಳಿದರು.

ಲಘು ಉದ್ಯೋಗ ಭಾರತಿ, ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಟಾರ್ಟಪ್ ವ್ಯವಸ್ಥೆಯಲ್ಲಿ ಮಹಿಳೆ ಹಾಗೂ ಮಹಿಳಾ ಸಬಲೀಕರಣ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ಕಂಪನಿ-ಸಂಸ್ಥೆಗಳು ನವೋದ್ಯಮಗಳಿಗೆ ನೆರವು ನೀಡಲು ಮುಂದೆ ಬರುತ್ತಿವೆ. ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದರು.

ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯದರ್ಶಿ ಶೈಲಜಾ ಬಾಗಡೆ, ಲಘು ಉದ್ಯೋಗ ಭಾರತಿಯ ಹೇಮಾ ಬೆಂತೂರ, ಪ್ರಸಾದ ಪಾವಟೆ, ಇತರರು ಇದ್ದರು.