ಜಿಲ್ಲೆ

ಹೊಸ ಇತಿಹಾಸ ರಚನೆ

ಪ್ರಶಾಂತ ಹೂಗಾರ

ಅಥಣಿ: ಹಿಂದು ಧರ್ಮದ ಪ್ರತೀಕವಾಗಿರುವ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಜರುಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಪಟ್ಟಣದ ಆರ್‌ಎಸ್‌ಪಿ ೌಂಡೇಷನ್ ಮತ್ತು ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವಿ ಪೂಜಾರಿ ಹೇಳಿದರು.

ಆರ್‌ಎಸ್‌ಪಿಯ ಜವಳಿ ಮಳಿಗೆಯ ಆವರಣದಲ್ಲಿ ಸೋಮವಾರ ವಿಜಯವಾಣಿ ಹೊರತಂದ ರಾಮೋತ್ಸವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ವಿಶ್ವಭೂಪಟದಲ್ಲಿ ಹೊಸ ಇತಿಹಾಸ ರಚನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೇವೆ ಸುವರ್ಣ ಅಕ್ಷರದಲ್ಲಿ ಬರೆದಿಡುವ ಸುದಿನವಾಗಿದೆ ಎಂದರು.

ವಿಜಯವಾಣಿ ಹೊರತಂದಿರುವ ವಿಶೇಷ ಸಂಚಿಕೆ ರಾಮೋತ್ಸವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಮೇಶ ಪೂಜಾರಿ, ಪ್ರಕಾಶ ಹಿಡಕಲ್, ಆದಿತ್ಯ ಪವಾರ, ರಾಜು ಹೊನಕಡಬಿ, ಸುಂದರ ಶಿಂಧೆ, ಸಂಗಮೇಶ ಹಲಸಗಿ, ಪವನ ವಾಗಮೋರೆ, ರೂಪಾ ಪೂಜಾರಿ, ಕಿಶೋರಿ ಚವಾನ, ಮಾಲಾ ಸಾರವಾಡ, ಕಸ್ತೂರಿ ಆಸಂಗಿ, ಸವಿತಾ ಕಾವೇರಿ ಇತರರಿದ್ದರು.