ಜಿಲ್ಲೆ

ಜಿಲ್ಲಾ ಪದವಿ ಪೂರ್ವ ಶಿಕ್ಷಣಕ್ಕೆ ಹೊಸ ಡಿಡಿ

ತುಮಕೂರು: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿ ಡಾ.ಬಾಲಗುರುಮೂರ್ತಿ ಗುರುವಾರ ಅಧಿಕಾರ ವಹಿಸಿಕೊಂಡರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸ್ಥಾನ, ಡಾ.ಅಂಬೇಡ್ಕರ್​ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ, ನ್ಯಾಷನಲ್​ ಲಾ ಸ್ಕೂಲ್​ ಆ್​ ಇಂಡಿಯಾ ಯೂನಿವರ್ಸಿಟಿಯ ಸಹ ಪ್ರಾಧ್ಯಾಪಕರಾಗಿ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಬಾಲಗುರುಮೂರ್ತಿ ಅವರು ಪ್ರಸ್ತುತ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತುಮಕೂರಿನ ನಂಟು: ಮೂಲತ@ ಕೋಲಾರ ಜಿಲ್ಲೆ ಮಾಲೂರು ಕಡೆಯವರಾದ ಬಾಲಗುರುಮೂರ್ತಿ ತುಮಕೂರಿನ ಜತೆ ನಂಟು ಹೊಂದಿದ್ದಾರೆ. ತುಮಕೂರು ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿದ್ದು ಶೈಕ್ಷಣಿಕ ಜಿಲ್ಲೆಯ ಬಗ್ಗೆ ಪರಿಚಯವಿದೆ.

ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷ ಪ್ರಭಾಕರ ರೆಡ್ಡಿ, ಕಲಾವಿದ ಕೋಟೆ ಕುಮಾರ, ಸಾಹಿತಿ ಸಿಹಿಜೀವಿ ವೆಂಕಟೇಶ್ವರ, ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ, ಸರ್ಕಾರಿ ಜೂನಿಯರ್​ ಕಾಲೇಜು ಪ್ರಾಚಾರ್ಯ ರಾಜಕುಮಾರ್​, ಊರುಕೆರೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ತ್ರಿವೇಣಿ, ಡಾ.ಎ.ಒ.ನರಸಿಂಹಮೂರ್ತಿ, ಅಕ್ಕಮ್ಮ, ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂದ ಜಿಲ್ಲಾಧ್ಯಕ್ಷ ಟಿ.ಆರ್​.ಬಸವರಾಜು ಮತ್ತಿತರರು ಶುಭಕೋರಿದರು.