ಜಿಲ್ಲೆ

ಹೊಸ ಕ್ರಿಮಿನಲ್​ ಕಾನೂನುಗಳ ಕಾರ್ಯಾಗಾರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೃಜನಾ ರಂಗ ಮಂದಿರದಲ್ಲಿ ಜಿಲ್ಲಾ ಪೊಲೀಸ್​, ಜಿಲ್ಲಾ ಸತ್ರ ನ್ಯಾಯಾಲಯ, ಕಂದಾಯ ಇಲಾಖೆ ಹಾಗೂ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಸಹಯೋಗದಲ್ಲಿ 3 ಹೊಸ ಕ್ರಿಮಿನಲ್​ ಕಾನೂನುಗಳ ಕುರಿತು ಭಾನುವಾರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲ ಮಲ್ಲಿಕಾರ್ಜುನ ಆರ್​.ಎಂ, ಡಾ. ಎಸ್​.ಜಿ. ಗೌಡಪ್ಪಗೌಡರ, ವಕೀಲ ಮಧುಸೂದನ್​ ಅವರು ಹೊಸ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ನ್ಯಾಯಾಧೀಶೆ ಕೆ.ಜಿ. ಶಾಂತಿ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಎನ್​.ವಿ. ಭರಮನಿ, ಪ್ರಾಂಶುಪಾಲ ಎಂ. ಎಂ. ಯಾದವಾಡ, ಪಿಟಿಎಸ್​ನ ಅಧಿಕಾರಿ, ಸಿಬ್ಬಂದಿ, ಆಂತರಿಕ ಭದ್ರತಾ ವಿಭಾಗ, ರಾಜ್ಯ ಗುಪ್ತವಾರ್ತೆ, ಲೋಕಾಯುಕ್ತ ಇಲಾಖೆ, ತಹಸೀಲ್ದಾರ ಹಂತದ ಅಧಿಕಾರಿಗಳು, ಕೆಸಿಡಿ ಕಾಲೇಜಿನ ಕಲಾ, ವಿಜ್ಞಾನ ವಿಭಾಗ ಹಾಹೂ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ವಿದ್ಯಾಥಿರ್ಗಳು, ಇತರರು ಇದ್ದರು.