ಬಸವನಬಾಗೇವಾಡಿ ಪಟ್ಟಣದ ಬಸ್ ಘಟಕದಿಂದ ಉಳವಿಗೆ ಆರಂಭಗೊಂಡ ನೂತನ ಬಸ್‌ಗೆ ವಿರಕ್ತಮಠದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ವಿವೇಕ ಬ್ರಿಗೇಡ್ ಸಂಸ್ಥೆ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆ ಮುಖಂಡರು ಪೂಜೆ ಸಲ್ಲಿಸಿದರು. 
ಜಿಲ್ಲೆ

ಬಸವನಬಾಗೇವಾಡಿ- ಉಳವಿಗೆ ನೂತನ ಬಸ್ ಆರಂಭ

Vijayapura - Desk - Gurappa Lokuri

ಬಸವನಬಾಗೇವಾಡಿ: ಪಟ್ಟಣದಿಂದ ಚನ್ನಬಸವಣ್ಣನ ಪಾವನ ಪುಣ್ಯಕ್ಷೇತ್ರ ಉಳವಿಗೆ ನೂತನ ಬಸ್ ಸಂಚಾರ ಆರಂಭಗೊಂಡಿತು.

ವಿರಕ್ತಮಠದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸವನಬಾಗೇವಾಡಿ ಘಟಕದಿಂದ ನಿತ್ಯ ಬೆಳಗ್ಗೆ 8.15ಕ್ಕೆ ಹೊರಟು ನಿಡಗುಂದಿ, ಬಾಗಲಕೋಟೆ, ಗದ್ದನಕೇರಿ ಕ್ರಾಸ್, ನರಗುಂದ, ಹುಬ್ಬಳ್ಳಿ, ಧಾರವಾಡ, ಹಳಿಯಾಳ, ದಾಂಡೇಲಿ ಮಾರ್ಗವಾಗಿ ಸಂಜೆ 6 ಗಂಟೆಗೆ ಉಳವಿ ತಲುಪಲಿದೆ. ಸಂಜೆ 7 ಗಂಟೆಗೆ ಉಳವಿಯಿಂದ ಇದೇ ಮಾರ್ಗವಾಗಿ ಬೆಳಗ್ಗೆ 7 ಗಂಟೆಗೆ ಪಟ್ಟಣ ತಲುಪಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ವಿವೇಕ್ ಬ್ರಿಗೇಡ್ ಮುಖ್ಯಸ್ಥ ವಿನೂತ ಕಲ್ಲೂರ ಮಾತನಾಡಿ, ಬಸವಣ್ಣನ ಜನ್ಮಸ್ಥಳದಿಂದ ಚನ್ನಬಸವಣ್ಣವರ ಕ್ಷೇತ್ರಕ್ಕೆ ನೇರ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.

ಡಾ. ಮಹಾಂತೇಶ ಮಡಿಕೇಶ್ವರ, ಅಪ್ಪು ಧನಶೆಟ್ಟಿ, ರವಿಗೌಡ ಚಿಕ್ಕೊಂಡ, ಕಾಶಿನಾಥ ಅವಟಿ, ಪ್ರಭಾಕರ ಖೇಡದ, ಬಾಬು ತೊರವಿ, ಸಂಗಣ್ಣ ಹುಜರತಿ, ಶಿವಾನಂದ ತೋಳನೂರ, ಸತೀಶ ಕ್ವಾಟಿ, ಶಶಿಧರ ಸ್ಥಾವರಮಠ ಹಾಗೂ ಸಾರಿಗೆ ಸಂಚಾರ ನಿಯಂತ್ರಕರಾದ ಅಂಬರೀಶ ಚವಾಣ್, ನಿರ್ವಾಹಕರಾದ ಸುರೇಶ ಗುಬ್ಬಾ, ಚಾಲಕರದ ಲಕ್ಷ್ಮೀಕಾಂತ ಹೂಗಾರ ಇತರರಿದ್ದರು.