ಕಾರವಾರ: ನವಜಾತ ಶಿಶುವನ್ನು ಗಿಡಗಳ ಸಂಧಿಯಲ್ಲಿ ಎಸೆದು ಹೋದ ಘಟನೆ ಬುಧವಾರ ನಡೆದಿದೆ.
ನಗರದ ಸರ್ಕಾರಿ ಪದವಿ ಕಾಲೇಜ್ ಹಿಂದಿನ ವಿಜಯನಗರದಲ್ಲಿ ಮನೆಯ ಎದುರು ಬೆಳಗಿನಜಾವ ಮಗುವು ಅಳುವಿನ ಶಬ್ದ ನೋಡಿ, ಹೋಗಿ ನೋಡಿದಾಗ ಎರಡು ಮೂರು ತಾಸು ಹಿಂದಷ್ಟೇ ಜನಿಸಿದ ಹೆಣ್ಣು ಮಗು ಕಂಡಿತ್ತು.
ಸ್ಥಳೀಯ ಪ್ರಕಾಶ ಶೇಟ್ ಪೊಲೀಸ್ ಹಾಗೂ ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದು, ಮಗುವನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಶಹರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.