ಹಳ್ಳದ ಮೇಲಿನ ಬ್ರಿಡ್ಜ್ ಮೇಲೆ ಬೆಳೆದಿರುವ ಜಾಲಿಗಿಡಗಳು. 
ಜಿಲ್ಲೆ

ರಸ್ತೆ ಮೇಲೆ ಆವರಿಸಿರುವ ಜಾಲಿಗಿಡಗಳು

Vijayapura - Desk - Gurappa Lokuri

ಗುಳೇದಗುಡ್ಡ: ಇಲ್ಲಿಂದ ಆಸಂಗಿ ಮಾರ್ಗವಾಗಿ ಪಟ್ಟದಕಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿನ ಹಳ್ಳಕ್ಕೆ ನಿರ್ಮಿಸಿದ ಬ್ರಿಡ್ಜ್ ಬಳಿ ಜಾಲಿಕಂಟಿಗಳು ಬೆಳೆದು ನಿಂತಿದ್ದು, ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.

ಹಳ್ಳದ ಬ್ರಿಜ್‌ನ ರಸ್ತೆಯ ಎರಡೂ ಬದಿಗೆ ಆವರಿಸಿರುವ ಜಾಲಿಗಿಡಗಳು ವಾಹನಗಳಿಗೆ ತೆರಚುತ್ತಿವೆ. ಹೀಗಾಗಿ ವಾಹನ ಸವಾರರು ಮುಳ್ಳುಗಳನ್ನು ಚುಚ್ಚಿಸಿಕೊಂಡು ಸಾಗಬೇಕಿದೆ. ಈ ರಸ್ತೆಯಲ್ಲಿ ಎದರು ಬದರು ವಾಹನಗಳು ಚಲಿಸುವಾಗ ಜಾಲಿಗಿಡಗಳು ವಾಹನ ಸವಾರರಿಗೆ, ವಾಹನದಲ್ಲಿನ ಪ್ರಯಾಣಿಕರಿಗೆ ಬಡಿದು ಗಾಯಗೊಳಿಸುತ್ತಿವೆ. ಆದ್ದರಿಂದ ಕೂಡಲೇ ಜಾಲಿಗಿಡಗಳನ್ನು ತೆರವುಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಹಳ್ಳದ ಸ್ವಚ್ಛತೆ ಕಾರ್ಯವನ್ನೂ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.