ಮಂಗಳೂರು : ವಿಭಿನ್ನ ಪರಿಕಲ್ಪನೆಯ ಚಿತ್ರಗಳು ಈಗ ತುಳು ಭಾಷೆಯಲ್ಲಿ ಬರುತ್ತಿದೆ. ತುಳುವಿನ 150ನೇ ಚಿತ್ರವಾದ ನಿರ್ದೇಶಕ ಸ್ವರಾಜ್ ಶೆಟ್ಟಿ ಅವರ ಹಲವು ದಿನಗಳ ಕನಸು ’ನೆತ್ತರೆಕೆರೆ’ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಿರಿಯ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.
ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಲಂಚುಲಾಲ್ ಕೆ.ಎಸ್. ನಿರ್ಮಾಣದ ‘ನೆತ್ತರಕೆರೆ’ ತುಳು ಚಿತ್ರವನ್ನು ಶುಕ್ರವಾರ ನಗರದ ಬಿಗ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಳಿಸಿ ವರು ಶುಭ ಹಾರೈಸಿದರು.
ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಇದುವರೆಗೆ ತುಳುವಲ್ಲಿ ಕಾಮಿಡಿ ಚಿತ್ರಗಳು ಬರುತ್ತಿದ್ದವು. ಇದೀಗ ವಿಭಿನ್ನ ಚಿತ್ರಗಳು ಬರಲಾರಂಭಿಸಿದೆ. ‘ನೆತ್ತರಕೆರೆ’ ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದರು.
ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತಾಡಿ, ತುಳುವಲ್ಲಿ ಬದಲಾವಣೆ ಇರಬೇಕು ಎಂದು ನೆತ್ತೆರೆಕೆರೆ ಚಿತ್ರ ಮಾಡಲಾಗಿದೆ. ಇದಕ್ಕೆ ತುಳುನಾಡಿನ ಸಮಸ್ತ ಜನರ ಆಶೀರ್ವಾದ ಇರಲಿ ಎಂದರು.
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಕಿರಿಕ್ ಕೀರ್ತಿ ಮಾತಾಡಿ, ನಟ ಪೃಥ್ವಿ ಅಂಬಾರ್, ಇಸ್ಮಾಯಿಲ್ ಮೂಡುಶೆಡ್ಡೆ, ಲಕ್ಷ್ಮಣ್ ಕುಂದರ್, ಕಿಶೋರ್ ಶೆಟ್ಟಿ, ಸಂತೋಷ್ ಶೆಟ್ಟಿ, ಎ.ಕೆ.ವಿಜಯ ಕೋಕಿಲ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ,
ಶೋಧನ್ ಶೆಟ್ಟಿ, ಶಶಿರಾಜ್ ಕಾವೂರು, ದಿಶಾಲಿ ಪೂಜಾರಿ, ನಮಿತಾ ಕೂಳೂರು, ಸಂದೇಶ್, ತ್ರಿಶೂಲ್ ಶೆಟ್ಟಿ, ಉದಯ್ ಬಳ್ಳಾಲ್ , ವಿನೋದ್‌ರಾಜ್ ಕೋಕಿಲ, ಸಚಿನ್ ಎ.ಎಸ್.ಉಪ್ಪಿನಂಗಡಿ, ನವೀನ್ ಶೆಟ್ಟಿ ಎಡ್ಮೆಮಾರ್ ಉಪಸ್ಥಿತರಿದ್ದರು. ಯತೀಶ್ ಪೂಜಾರಿ
ಕಾರ್ಯಕ್ರಮ ನಿರೂಪಿಸಿದರು.
ನೆತ್ತೆರೆಕೆರೆ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್,, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್,
ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.