ವಿಜಯಪುರ : ನೇತಾಜಿ ಸುಭಾಸಚಂದ್ರ ಬೋಸ್ ಸ್ವತಂತ್ರ ಪೂರ್ವ ಭಾರತ ದೇಶದಲ್ಲಿ ತಮ್ಮದೇ ಆದ ಮಿಲಿಟರಿ ಅಕಾಡೆಮಿ ಸ್ಥಾಪಿಸಿ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಅಲ್ಲದೆ, 2ನೇ ಮಹಾಯುದ್ಧದಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯದ ಮೂಲಕ ಜಗತ್ತಿಗೆ ಭಾರತದ ಶಕ್ತಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಡೈಟ್ ಉಪನ್ಯಾಸಕ ನಾರಾಯಣ ಬಾಬಾನಗರ ಹೇಳಿದರು.
ಇಲ್ಲಿನ ಕೀರ್ತಿ ನಗರದ ಶಮ್ಸ್ ಪೂರ್ವ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಸಚಂದ್ರ ಬೋಸ್ ಜಯಂತಿಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ದರ್ಶನಿ ದರಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ರವಿಕುಮಾರ ವಾಡಕರ ನೇತಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯ ಗುರುಮಾತೆ ರೇವತಿ ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು.