ಜಿಲ್ಲೆ

31ರಂದು ನೇತಾಜಿ ಸೇವಾ ವೇದಿಕೆ ವಾರ್ಷಿಕೋತ್ಸವ

ಇಂದಿರಾ ಎನ್ ಕೆ

ಕೊಕ್ಕರ್ಣೆ: ನಾಲ್ಕೂರು ನೇತಾಜಿ ಸೇವಾ ವೇದಿಕೆ 15ನೇ ವಾರ್ಷಿಕೋತ್ಸವ, ನೇತಾಜಿ 128ನೇ ಜನ್ಮದಿನಾಚರಣೆ ಜ.31ರಂದು ಮುದ್ದೂರು ವಿಎಸ್‌ಎಸ್ ಶಾಲಾ ಮೈದಾನದಲ್ಲಿ ಜರುಗಲಿದೆ.

ನೇತಾಜಿ ಸೇವಾ ವೇದಿಕೆ ಅಧ್ಯಕ್ಷ ಅವಿನಾಶ್ ರಾವ್ ಸಿಎ ಅಧ್ಯಕ್ಷತೆ ವಹಿಸುವರು. ಸಾಧಕರನ್ನು ಶಾಸಕ ಯಶ್‌ಪಾಲ್ ಎ.ಸುವರ್ಣ ಸನ್ಮಾನಿಸುವರು. ಪ್ರತಾಪ್ ಹೆಗ್ಡೆ ಮಾರಾಳಿ, ಎನ್.ಕರುಣಾಕರ ಶೆಟ್ಟಿ ಕಜ್ಕೆ, ಬಾಲಕೃಷ್ಣ ವೈದ್ಯ, ಕಾಶಿನಾಥ ಶೆಣೈ, ಪ್ರಸಾದ್ ಹೆಗ್ಡೆ ಮಾರಾಳಿ, ನಾಗೇಂದ್ರ ಆಚಾರ್ಯ ಮಾರಾಳಿ, ಶಶಿಧರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿರುವರು. ದಿ.ಐ.ಕೃಷ್ಣಕಾರಂತ ಸ್ಮಾರಕ ಪ್ರಶಸ್ತಿಯನ್ನು ನಂಚಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ದೀಪಾ ಶೆಟ್ಟಿ ಅವರಿಗೆ ಪ್ರದಾನಗೊಳ್ಳಲಿದ್ದು, ವಿಠಲ ಶೆಟ್ಟಿಗಾರ ಮುದ್ದೂರು ಅವರಿಗೆ ಸನ್ಮಾನ, ಶ್ರೀನಿವಾಸ ಭಂಡಾರಿ ಅವರಿಗೆ ಹುಟ್ಟೂರ ಸನ್ಮಾನ ನಡೆಯಲಿದೆ ಎಂದು ನೇತಾಜಿ ಸೇವಾ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಮರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇದಿಕೆ ನಡೆದು ಬಂದ ದಾರಿ

2008ರಲ್ಲಿ ಪ್ರಸಾದ್ ಹೆಗ್ಡೆ ಮಾರಾಳಿ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ಸೇವಾ ವೇದಿಕೆ ಆರಂಭಗೊಂಡಿದೆ. ರಕ್ತದಾನ ಶಿಬಿರ, ಸ್ವಚ್ಛತೆ ಕಾರ್ಯಕ್ರಮ, ವಿವಿಧ ಕ್ರೀಡಾಕೂಟಗಳ ಆಯೋಜಿಸುವ ಮೂಲಕ ರಾಜ್ಯಮಟ್ಟದಲ್ಲಿ ಗಮನಸೆಳೆದಿದೆ. ಜತೆಗೆ ಅಶಕ್ತರಿಗೆ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಹಿತ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಜನಮೆಚ್ಚುಗೆ ಪಡೆದಿದೆ.