ಜಿಲ್ಲೆ

ಮೀನುಗಾರರ ಬಲೆ ತುಂಡು ಮಾಡಿದ ನೌಕಾ ಸಿಬ್ಬಂದಿ

ಕಾರವಾರ: ಸೀಬರ್ಡ್ ನೌಕಾ ನೆಲೆಯ ವ್ಯಾಪ್ತಿಯ ಒಳಗೆ ನುಸುಳಿದ ಆರೋಪದ ಮೇಲೆ ಮೀನುಗಾರರ ಬಲೆಗಳನ್ನು ನೌಕಾಸೇನೆಯ ಸಿಬ್ಬಂದಿ ತುಂಡು ಮಾಡಿದ ಘಟನೆ ಮುದಗಾ ಸಮೀಪ ನಡೆದಿದೆ.
ದಾಮೋದರ ತಾಂಡೇಲ ಅವರಿಗೆ ಸೇರಿದ ವೀರ ಗಣಪತಿ ಹೆಸರಿನ ಬೋಟ್ ಮೀನುಗಾರಿಕೆ ನಡೆಸುತ್ತಿರುವ ಸಮಯದಲ್ಲಿ ಬೋಟ್‌ನಲ್ಲಿ ಬಂದ ನೌಕಾ ಸಿಬ್ಬಂದಿ ಬಲೆಯನ್ನು ಎಳೆದು ತುಂಡರಿಸಿ ಬಿಟ್ಟಿದ್ದಾರೆ. ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಮೀನುಗಾರರು ದೂರಿದ್ದಾರೆ.
ಮೀನಿನ ಬಲೆ ನಿರ್ದಿಷ್ಟ ಪ್ರದೇಶದಲ್ಲಿ ನಿಲ್ಲುವುದಿಲ್ಲ. ಗಾಳಿಗೆ ಅಲ್ಲಲ್ಲಿ ಹೋಗುತ್ತದೆ. ನೌಕಾನೆಲೆಯ ಒಳಗೆ ಹೋಗಿದೆ ಎಂಬ ನೆಪ ಮಾಡಿಕೊಂಡು ಬಲೆ ತುಂಡರಿಸಿ ಮೀನುಗಾರರಿಗೆ ನಷ್ಟ ಮಾಡುವುದು ಸರಿಯಲ್ಲ ಎಂದು ಮೀನುಗಾರರ ಮುಖಂಡ ವಿನಾಯಕ ಹರಿಕಂತ್ರ ಆಕ್ಷೇಪಿಸಿದ್ದಾರೆ.